Home Advertisement
Home ಕ್ರೀಡೆ IPL 2026: ಪ್ಲೇಆಫ್‌ ಕನಸಿಗೆ ಜೀವ ತುಂಬಲು ಕೆಕೆಆರ್‌ಗೆ ಬೇಕಿದೆ ಗೆಲುವು

IPL 2026: ಪ್ಲೇಆಫ್‌ ಕನಸಿಗೆ ಜೀವ ತುಂಬಲು ಕೆಕೆಆರ್‌ಗೆ ಬೇಕಿದೆ ಗೆಲುವು

0
10

ಹೈದರಾಬಾದ್:‌ ಸನ್‌ರೈಸರ್ಸ್‌ ಹೈದರಾಬಾದ್‌ ತನ್ನ ತವರು ಮೈದಾನದಲ್ಲಿಂದು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ನಡೆಯಲಿರುವ ಐಪಿಎಲ್‌ 45ನೇ ಪಂದ್ಯದಲ್ಲಿ ಹೈದರಾಬಾದ್‌ ಮತ್ತು ಕೋಲ್ಕತ್ತಾ ಕಾದಾಟ ನಡೆಸಲಿದೆ.

ಪ್ರಸಕ್ತ ಪಂದ್ಯಾವಳಿಯಲ್ಲಿ ಹೈದ್ರಾಬಾದ್‌ ಮತ್ತು ಕೋಲ್ಕತ್ತಾ ಎರಡನೇ ಭಾರಿ ಮುಖಾಮುಖಿಯಾಗಲಿದ್ದು, ಹಿಂದಿನ ಪಂದ್ಯದಲ್ಲಿ ಹೈದ್ರಾಬಾದ್‌ 65 ರನ್‌ಗಳ ಜಯ ಸಾಧಿಸಿತ್ತು.

ಹೆನ್ರಿಕ್ ಕ್ಲಾಸೆನ್, ಅಭಿಷೇಕ್‌ ಶರ್ಮಾ, ಟ್ರಾವಿಸ್ ಹೆಡ್‌ ಮತ್ತು ನಿತೀಶ್ ಕುಮಾರ್ ರೆಡ್ಡಿ ಎಸ್‌ಆರ್‌ಎಚ್‌ ಪರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇದರಿಂದಾಗಿ ಹೈದ್ರಾಬಾದ್‌ ತಂಡ 227 ರನ್‌ ಗುರಿ ನೀಡಿತ್ತು.

ರಘುವಂಶಿ ಅವರ ಆಕರ್ಷಕ ಅರ್ಧಶತಕದ ಹೊರತಾಗಿಯೂ ಕೋಲ್ಕತ್ತಾ ಕೇವಲ 161 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಗಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಕಳೆದ ಪಂದ್ಯದ ನ್ಯೂನ್ಯತೆಗಳನ್ನು ಸರಿಪಡಿಸಕೊಂಡರೆ ಮಾತ್ರ ಕೋಲ್ಕತ್ತಾ ಜಯ ಗಳಿಸಬಹುದು.

ಹೈದರಾಬಾದ್‌ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದರೆ, ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಅಂಕಪಟ್ಟಿಯ ಕೆಳ ಭಾಗದಿಂದ ಮೂರನೇ ಸ್ಥಾನ ಅಂದರೆ 8ನೇ ಸ್ಥಾನವನ್ನು ಪಡೆದಿದೆ.

ಹೈದರಾಬಾದ ಆಡಿದ 9 ಪಂದ್ಯಗಳ ಪೈಕಿ 6ರಲ್ಲಿ ಗೆಲುವು, ನಾಲ್ಕರಲ್ಲಿ ಸೋಲು ಕಂಡಿದ್ದು, ಒಟ್ಟು 12 ಅಂಕಗಳನ್ನು ಪಡೆದಿದೆ. ಕೋಲ್ಕತ್ತಾ ಆಡಿದ 8 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಜಯ ಸಾಧಿಸಿದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಆದರೆ ಒಂದು ಪಂದ್ಯಕ್ಕೆ ಮಳೆ ಅಡ್ಡಿಯಾಗಿ 1 ಅಂಕ ಪಡೆದುಕೊಂಡಿದೆ. ಹೀಗಾಗಿ ಕೇವಲ 5 ಅಂಕ ಮಾತ್ರ ಪಡೆದಿದೆ.

ಕೋಲ್ಕತ್ತಾ ತಂಡಕ್ಕೆ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಕೋಲ್ಕತ್ತಾ ಉಳಿದಿರುವ ತನ್ನ 6 ಪಂದ್ಯಗಳಲ್ಲಿಯೂ ಜಯ ಸಾಧಿಸಿದರೂ 17 ಅಂಕವಾಗಲಿದೆ. ಹೀಗಿದ್ದಾಗ ಅದರ ಮುಂದಿನ ಪ್ಲೇ-ಆಫ್‌ ಕನಸು ಕೂಡ ಇತರೆ ತಂಡದ ಆಧಾರದಲ್ಲಿ ನಿರ್ಧಾರವಾಗಲಿದೆ.