Home Advertisement
Home ಕ್ರೀಡೆ IPL 2026: ಗುಜರಾತ್‌ ವಿರುದ್ಧ ಟಾಸ್‌ ಗೆದ್ದ ಬೆಂಗಳೂರು

IPL 2026: ಗುಜರಾತ್‌ ವಿರುದ್ಧ ಟಾಸ್‌ ಗೆದ್ದ ಬೆಂಗಳೂರು

0
50

ಬೆಂಗಳೂರು: ಐಪಿಎಲ್‌ ಪಂದ್ಯಾವಳಿಯ 34ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟಾಸ್‌ನಲ್ಲಿ ಗೆಲುವು ಕಂಡಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪ್ರಸಕ್ತ ಐಪಿಎಲ್‌ನ ಕೊನೆಯ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದೆ.

ಬೆಂಗಳೂರಿನ ಪಿಚ್ ಎಂದಿನಂತೆ ಬ್ಯಾಟರ್‌ಗಳಿಗೆ ಸ್ವರ್ಗವಾಗಿದ್ದು, ಇಲ್ಲಿ ರನ್ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕ ಬೌಂಡರಿಗಳು ಇರುವುದರಿಂದ ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು.

ಮುಖಾಮುಖಿ ದಾಖಲೆ: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಳೆದ ಮೂರು ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಎರಡು ಬಾರಿ ಜಯಗಳಿಸಿ ಮೇಲುಗೈ ಸಾಧಿಸಿದೆ. ಈ ಅಂಕಿ-ಅಂಶ ಆರ್‌ಸಿಬಿಗೆ ತುಸು ಆತಂಕ ಮೂಡಿಸಿದರೂ, ಅಭಿಮಾನಿಗಳೆದುರು ಈ ಪಂದ್ಯ ಗೆದ್ದು ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರ್ಧಾರ ಮಾಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ಸಿ), ಜಿತೇಶ್ ಶರ್ಮಾ(ಡಬ್ಲ್ಯೂ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ರಸಿಖ್ ಸಲಾಮ್ ದಾರ್

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್(ಸಿ), ಜೋಸ್ ಬಟ್ಲರ್(ಡಬ್ಲ್ಯೂ), ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್, ರಶೀದ್ ಖಾನ್, ಮನವ್ ಸುತಾರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್