Home Advertisement
Home ಕ್ರೀಡೆ IPL 2026: ಚೆನ್ನೈಗೆ ಮಧ್ಯಮ ಕ್ರಮಾಂಕದ ಆಸರೆ, 181 ಟಾರ್ಗೆಟ್

IPL 2026: ಚೆನ್ನೈಗೆ ಮಧ್ಯಮ ಕ್ರಮಾಂಕದ ಆಸರೆ, 181 ಟಾರ್ಗೆಟ್

0
22

ಚೆನ್ನೈ: ಪ್ಯಾಟ್ ಕಮ್ಮಿನ್ಸ್ ಉತ್ತಮ ಬೌಲಿಂಗ್‌ ದಾಳಿಯ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ ನಿರ್ಣಾಯಕ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ‌ 7 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿತು.

ಆರಂಭದಲ್ಲಿಯೇ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಸಂಜು ಸ್ಯಾಮ್ಸನ್‌ ಕೇವಲ 13 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ನಿಂದ 27 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

ಉರ್ವಿಲ್ ಪಟೇಲ್ (13), ರುತುರಾಜ್ ಗಾಯಕ್ವಾಡ್‌ (15) ಅಲ್ಪ ರನ್‌ಗಳ ಕಾಣಿಕೆ ನೀಡಿದರು. ಕಾರ್ತಿಕ್ ಶರ್ಮಾ 19 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ನಿಂದ 32 ರನ್‌ ನೀಡಿ ಹೊರನಡೆದರು.

ಐದನೇ ವಿಕೆಟ್‌ಗೆ ಜತೆಯಾದ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಜೋಡಿಯ 59 ರನ್‌ಗಳ ಜತೆಯಾಟ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾಯಿತು.

ಡೆವಾಲ್ಡ್ ಬ್ರೆವಿಸ್ 27 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನಿಂದ 44 ರನ್‌ ಚಚ್ಚಿದರೆ, ಶಿವಂ ದುಬೆ 23 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸ್‌ನಿಂದ 26 ರನ್‌ ಗಳಿಸಿ ಔಟಾದರು.

ಹೈದರಾಬಾದ್‌ ಪರ ಪ್ಯಾಟ್ ಕಮ್ಮಿನ್ಸ್ 28ಕ್ಕೆ 3 ವಿಕೆಟ್‌ ಪಡೆದರೆ, ಸಾಕಿಬ್ ಹುಸೇನ್ 34ಕ್ಕೆ 2, ಈಶಾನ್ ಮಾಲಿಂಗ 26ಕ್ಕೆ 1, ಪ್ರಫುಲ್ ಹಿಂಗೆ 37ಕ್ಕೆ 1 ವಿಕೆಟ್‌ ಪಡೆದರು.