Home Advertisement
Home ಸುದ್ದಿ ವಿದೇಶ ಓಪನ್‌ಎಐ CTO ಶ್ರೀನಿವಾಸ್ ನಾರಾಯಣನ್ ರಾಜೀನಾಮೆ ಘೋಷಣೆ

ಓಪನ್‌ಎಐ CTO ಶ್ರೀನಿವಾಸ್ ನಾರಾಯಣನ್ ರಾಜೀನಾಮೆ ಘೋಷಣೆ

0
75

ಟೆಕ್ ಜಗತ್ತಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿ, ಶ್ರೀನಿವಾಸ್ ನಾರಾಯಣನ್ ಅವರು OpenAI ನ ಬಿ2ಬಿ ಅಪ್ಲಿಕೇಶನ್‌ಗಳ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಮೂರು ವರ್ಷಗಳ ಸೇವೆಯ ನಂತರ ಮುಂದಿನ ವಾರದ ಕೊನೆಯಲ್ಲಿ ಅವರು ಕಂಪನಿಯನ್ನು ತೊರೆಯಲಿದ್ದಾರೆ.

“ಅದ್ಭುತ ಪ್ರಯಾಣ”ಕ್ಕೆ ತೆರೆ : ಸಾಮಾಜಿಕ ಜಾಲತಾಣಗಳಾದ ಎಕ್ಸ್ ಮತ್ತು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನಾರಾಯಣನ್ ಅವರು ಕಳೆದ ಮೂರು ವರ್ಷಗಳನ್ನು “ಹತ್ತು ವರ್ಷಗಳಂತೆ ಭಾಸವಾದ ಅದ್ಭುತ ಪ್ರಯಾಣ” ಎಂದು ಬಣ್ಣಿಸಿದ್ದಾರೆ. ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಭಾರತಕ್ಕೆ ತೆರಳಿ ತಮ್ಮ ವಯಸ್ಸಾದ ಪೋಷಕರೊಂದಿಗೆ ಸಮಯ ಕಳೆಯಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.

ನಾಯಕತ್ವಕ್ಕೆ ಕೃತಜ್ಞತೆ : ತಮ್ಮ ಸಂದೇಶದಲ್ಲಿ ಅವರು ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಮತ್ತು ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್ (Greg Brockman) ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ತಂತ್ರಜ್ಞಾನ ಮತ್ತು ಸಮಾಜಕ್ಕಾಗಿ ಈ ಐತಿಹಾಸಿಕ ಅವಧಿಯಲ್ಲಿ ಕೆಲಸ ಮಾಡಿರುವುದು ನನ್ನ ಪಾಲಿಗೆ ಮಹತ್ತರ ಅನುಭವ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಕೊಡುಗೆಗಳು : ನಾರಾಯಣನ್ ಅವರು ಮೊದಲು ಎಂಜಿನಿಯರಿಂಗ್ ಉಪಾಧ್ಯಕ್ಷರಾಗಿ ಸೇರಿ ನಂತರ CTO ಹುದ್ದೆಗೆ ಏರಿದ್ದರು. ಅವರ ನೇತೃತ್ವದಲ್ಲಿ ChatGPT ಮತ್ತು ಎಪಿಐ ಪ್ಲಾಟ್‌ಫಾರ್ಮ್ ಅಭಿವೃದ್ಧಿ, ಎಂಟರ್‌ಪ್ರೈಸ್ AI ಉಪಕರಣಗಳ ವಿಸ್ತರಣೆ, ಅನ್ವಯಿಕ ಎಂಜಿನಿಯರಿಂಗ್ ತಂಡದ ನಿರ್ಮಾಣ ಇವುಗಳ ಮೂಲಕ ಸಂಶೋಧನೆಯನ್ನು ಲಕ್ಷಾಂತರ ಜನರು ಬಳಸುವ ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವೃತ್ತಿಜೀವನ ಹಿನ್ನೆಲೆ : ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಯಾಗಿರುವ ನಾರಾಯಣನ್, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ವೃತ್ತಿಜೀವನವನ್ನು IBM ನಲ್ಲಿ ಪ್ರಾರಂಭಿಸಿ, ನಂತರ Meta ನಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಫೇಸ್‌ಬುಕ್ ಫೋಟೋಗಳು ಹಾಗೂ AI ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ಮುಂದೇನು? : ನಾರಾಯಣನ್ ಅವರ ಮುಂದಿನ ಯೋಜನೆ ಕುರಿತು ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಆದರೆ ತಾತ್ಕಾಲಿಕವಾಗಿ ಕುಟುಂಬದೊಂದಿಗೆ ಸಮಯ ಕಳೆಯುವ ನಿರ್ಧಾರ ಕೈಗೊಂಡಿದ್ದಾರೆ.