Home Advertisement
Home ಸುದ್ದಿ ದೇಶ SSC ಉದ್ಯೋಗಾವಕಾಶ: ಅನುವಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನ

SSC ಉದ್ಯೋಗಾವಕಾಶ: ಅನುವಾದಕ ಹುದ್ದೆಗಳಿಗೆ ಅರ್ಜಿ ಆಹ್ವಾನ

0
77

SSC ಹೊಸ ನೇಮಕಾತಿ ಪ್ರಕಟಣೆ: ಅನುವಾದಕರಿಗೆ ಭರ್ಜರಿ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಖಾಲಿ ಇರುವ ಗ್ರೂಪ್ ‘ಬಿ’ ಗೆಜೆಟೆಡ್ ಅಲ್ಲದ ಹುದ್ದೆಗಳ ಭರ್ತಿಗೆ ಸಿಬ್ಬಂದಿ ನೇಮಕಾತಿ ಆಯೋಗ Staff Selection Commission (SSC) ‘ಕಂಬೈನ್ಡ್ ಹಿಂದಿ ಟ್ರಾನ್ಸ್ಲೇಟರ್ ಪರೀಕ್ಷೆ–2026’ಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ–ಕೇರಳ ವಲಯದ ಬೆಂಗಳೂರು ಪ್ರಾದೇಶಿಕ ಕಚೇರಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಒಟ್ಟು 84 ತಾತ್ಕಾಲಿಕ ಹುದ್ದೆಗಳು ಲಭ್ಯವಿವೆ.

ಈ ನೇಮಕಾತಿ ಪ್ರಕ್ರಿಯೆಯಡಿ ಜೂನಿಯರ್ ಹಿಂದಿ ಅನುವಾದಕ, ಕಿರಿಯ ಅನುವಾದಕ ಅಧಿಕಾರಿ, ಹಿರಿಯ ಹಿಂದಿ ಅನುವಾದಕ ಹಾಗೂ ಸಬ್ ಇನ್ಸ್‌ಪೆಕ್ಟರ್ (ಹಿಂದಿ ಅನುವಾದಕ) ಹುದ್ದೆಗಳು ಭರ್ತಿಯಾಗಲಿವೆ. ಆಸಕ್ತ ಅಭ್ಯರ್ಥಿಗಳು Staff Selection Commission ಅಧಿಕೃತ ವೆಬ್‌ಸೈಟ್ (ssc.gov.in) ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 14, 2026 (ರಾತ್ರಿ 11:00 ಗಂಟೆಯವರೆಗೆ) ಆಗಿದ್ದು, ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಮೇ 19 ಮತ್ತು 20 ರಂದು ಅವಕಾಶ ನೀಡಲಾಗಿದೆ. ಪರೀಕ್ಷೆಯು ಆಗಸ್ಟ್ ಅಥವಾ ಸೆಪ್ಟೆಂಬರ್ 2026ರಲ್ಲಿ ಕಂಪ್ಯೂಟರ್ ಆಧಾರಿತವಾಗಿ ನಡೆಯುವ ನಿರೀಕ್ಷೆಯಿದೆ.

ಆಯ್ಕೆ ಪ್ರಕ್ರಿಯೆ ಹೇಗೆ? : ಈ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ. ಪೇಪರ್-1: ಜನರಲ್ ಹಿಂದಿ ಮತ್ತು ಜನರಲ್ ಇಂಗ್ಲಿಷ್ ವಿಷಯಗಳ ಮೇಲೆ ತಲಾ 100 ಅಂಕಗಳ ವಸ್ತುನಿಷ್ಠ ಪ್ರಶ್ನೆಗಳು ಹಾಗೂ ಪೇಪರ್-2: ಅನುವಾದ ಮತ್ತು ಪ್ರಬಂಧ ಬರವಣಿಗೆಯ ವಿವರಣಾತ್ಮಕ ಪರೀಕ್ಷೆ (200 ಅಂಕಗಳು)

ಅಭ್ಯರ್ಥಿಗಳ ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಯನ್ನು ಆಗಸ್ಟ್ 1, 2026ರ ಅನ್ವಯ ಪರಿಗಣಿಸಲಾಗುತ್ತದೆ.

ಅರ್ಜಿ ಶುಲ್ಕ ಮತ್ತು ವಿನಾಯಿತಿಗಳು : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು, ಪ.ಜಾ/ಪ.ಪಂ, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ವೇತನ ಮತ್ತು ಸೌಲಭ್ಯಗಳು : ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಮಟ್ಟದ ಅನುಗುಣವಾಗಿ ಮಾಸಿಕ ವೇತನವು ಸುಮಾರು ₹35,393 (ಪೇ ಲೆವೆಲ್-1) ರಿಂದ ₹88,645 (ಪೇ ಲೆವೆಲ್-7) ವರೆಗೆ ಇರಲಿದೆ. ಜೊತೆಗೆ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ಮತ್ತು ಸೌಲಭ್ಯಗಳೂ ಲಭ್ಯವಾಗುತ್ತವೆ.

ಹೆಚ್ಚಿನ ಮಾಹಿತಿ: ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು Staff Selection Commission ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯವಾಣಿ ಸಂಖ್ಯೆ 080-25502520 ಅನ್ನು ಸಂಪರ್ಕಿಸಬಹುದು.