Home Advertisement
Home ಸುದ್ದಿ ದೇಶ ರಾಯಪುರಂನಲ್ಲಿ ಆಟೋ ಚಾಲಕ ವಿಜಯ್ ಧಾಮು ಭರ್ಜರಿ ಗೆಲುವು

ರಾಯಪುರಂನಲ್ಲಿ ಆಟೋ ಚಾಲಕ ವಿಜಯ್ ಧಾಮು ಭರ್ಜರಿ ಗೆಲುವು

0
70

ಚನ್ನೈ: ತಮಿಳುನಾಡಿನ ಬದಲಾವಣೆಯ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಭಾರೀ ಮುನ್ನಡೆಯನ್ನು ಸಾಧಿಸಿದೆ. ಈ ಮೂಲಕ ಹೊಸ ಅಧ್ಯಾಯವೊಂದು ಬರೆದಿದೆ.

ಇನ್ನು ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ರಾಯಪುರಂ ಕ್ಷೇತ್ರದಲ್ಲಿ ಆಟೋ ಚಾಲಕರಾಗಿರುವ ಕೆ. ವಿಜಯ್ ಧಾಮು ಭರ್ಜರಿ ಜಯ ಸಾಧಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿ ಧಾಮು, 59,091 ಮತಗಳನ್ನು ಪಡೆದು, ಸಮೀಪದ ಪ್ರತಿಸ್ಪರ್ಧಿಯ ವಿರುದ್ಧ 14,249 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.

ಐದು ಬಾರಿ ಶಾಸಕರಾಗಿದ್ದ ಎಐಎಡಿಎಂಕೆ ನಾಯಕ ಡಿ. ಜಯಕುಮಾರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಅವರಿಗೆ ಕೇವಲ 18,420 ಹೆಚ್ಚು ಮತಗಳು ಲಭಿಸಿವೆ. ಡಿಎಂಕೆಯ ಸುಬೈರ್ ಖಾನ್ 44,842 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

ವಿಜಯ್ ಮಕ್ಕಳ್ ಇಯಕ್ಕಂ (ಅಭಿಮಾನಿಗಳ ಸಂಘ) ಮೂಲಕ ನೆಲಮಟ್ಟದಲ್ಲಿ ಕೆಲಸ ಮಾಡಿದ್ದ ಧಾಮು, ಸಾಮಾನ್ಯ ವ್ಯಕ್ತಿಯ ಇಮೇಜ್‌ನ್ನು ಮುಂದಿಟ್ಟು ಪ್ರಚಾರ ನಡೆಸಿದ್ದರು. ಪಕ್ಷದ ನಾಯಕ ವಿಜಯ್ ಅವರ ಜನಪ್ರಿಯತೆ ಈ ಗೆಲುವಿಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.