Home Advertisement
Home ನಮ್ಮ ಜಿಲ್ಲೆ ಉಡುಪಿ ಪರಿಷತ್ ಚುನಾವಣೆ: ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಬಿಜೆಪಿ ನಾಯಕನ ಫೊಟೊ!

ಪರಿಷತ್ ಚುನಾವಣೆ: ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಬಿಜೆಪಿ ನಾಯಕನ ಫೊಟೊ!

0
160

ಉಡುಪಿ: ವಿಧಾನ ಪರಿಷತ್‌ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್‌ ಪ್ರಚಾರ ಪತ್ರದಲ್ಲಿ ಬಿಜೆಪಿ ನಾಯಕರೋರ್ವರ ಫೊಟೊ ಮುದ್ರಿಸಿ ಎಡವಟ್ಟು ಮಾಡಿಕೊಂಡಿದೆ.

ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ ಕೆ ಮಂಜುನಾಥ ಕುಮಾರ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯಕುಮಾ‌ರ್ ಶೆಟ್ಟಿ ಅವರ ಭಾವಚಿತ್ರ ಮುದ್ರಿಸಲಾಗಿದೆ!

ಈ ಎಡವಟ್ಟು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆರು ಪುಟಗಳ ಪ್ರಚಾರ ಪತ್ರದ ಐದನೇ ಪುಟದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರ ಫೋಟೊಗಳ ಮಧ್ಯೆ ಬಿಜೆಪಿಯ ಉದಯಕುಮಾ‌ರ್ ಶೆಟ್ಟಿ ಅವರ ಫೋಟೊ ಕೂಡಾ ರಾರಾಜಿಸುತ್ತಿದೆ.

ಈಗಾಗಲೇ ಸಾವಿರಾರು ಪ್ರಚಾರ ಪತ್ರಗಳನ್ನು ಮುದ್ರಿಸಿ ಹಂಚಲಾಗಿದೆ.