Home Advertisement
Home ಸಿನಿ ಮಿಲ್ಸ್ ವಿಜಯ್-ರಶ್ಮಿಕಾ ಮದುವೆಗೆ ಹೊಸ ಮುಹೂರ್ತ ಕೊಟ್ಟ ಜ್ಯೋತಿಷಿಗಳು; ದಿನಾಂಕ ಬದಲಿಸಿದ್ದೇಕೆ?

ವಿಜಯ್-ರಶ್ಮಿಕಾ ಮದುವೆಗೆ ಹೊಸ ಮುಹೂರ್ತ ಕೊಟ್ಟ ಜ್ಯೋತಿಷಿಗಳು; ದಿನಾಂಕ ಬದಲಿಸಿದ್ದೇಕೆ?

0
149

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಕುರಿತಾದ ಸುದ್ದಿಗಳು ಕಾಳ್ಗಿಚ್ಚಿನಂತೆ ಹಬ್ಬುತ್ತಿವೆ. ಈ ಜೋಡಿಯ ಅಭಿಮಾನಿಗಳು ವಿವಾಹದ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 2026 ರಲ್ಲಿ ಇವರ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ಇತ್ತೀಚಿನ ಮಾಹಿತಿ ಪ್ರಕಾರ, ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮೊದಲು ಫೆಬ್ರವರಿ 2 ಅಥವಾ ಫೆಬ್ರವರಿ 5 ರಂದು ಮದ್ವೆ ನಡೆಯಬಹುದು ಎಂಬ ಸುದ್ದಿಗಳಿದ್ದವು, ಆದ್ರೆ ಜ್ಯೋತಿಷಿಗಳ ಸಲಹೆಯಂತೆ ದಿನಾಂಕವನ್ನು ಫೆಬ್ರವರಿ 26 ಕ್ಕೆ ನಿಗದಿಪಡಿಸಲಾಗಿದೆ ಎಂಬ ಮಾಹಿತಿಯು ಬಹಳ ಸದ್ದು ಮಾಡಿತ್ತು. ಉದಯಪುರದ ಐತಿಹಾಸಿಕ ಅರಮನೆಯೊಂದರಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕೇವಲ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಇವರಿಬ್ಬರು ಸದ್ಯ ‘ರಣಬಾಲಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಕಳೆದ ದಿನಗಳಲ್ಲಿ ‘ಪುಷ್ಪ 2: ದಿ ರೂಲ್’ ಮತ್ತು ‘ದಿ ಗರ್ಲ್‌ಫ್ರೆಂಡ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು, ವಿಜಯ್ ದೇವರಕೊಂಡ ಮತ್ತು ಭಾವಿ ಪತ್ನಿಯಾಗಲಿರುವ ರಶ್ಮಿಕಾ ಮಂದಣ್ಣ ʻರಣಬಾಲಿʼ ಚಿತ್ರದ ಮೂಲಕ ಅತೀ ಶೀಘ್ರವೇ ತೆರೆ ಮೇಲೆ ಮಿಂಚಲಿದ್ದಾರೆ.

ಹಾಗೇ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ, ವಿಜಯ್ ಆಗಲಿ ಅಥವಾ ರಶ್ಮಿಕಾ ಆಗಲಿ ಮದುವೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇತ್ತೀಚೆಗೆ ಅಕ್ಟೋಬರ್ 2025 ರಲ್ಲಿ ಹೈದರಾಬಾದ್‌ನಲ್ಲಿ ಇವರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದೆ ಎನ್ನಲಾಗುತ್ತಿದೆ. ಆದ್ರೆ ಈ ಜೋಡಿ ಯಾವಾಗಲೂ ತಮ್ಮ ಸಂಬಂಧವನ್ನು “ಉತ್ತಮ ಗೆಳೆತನ” ಎಂದೇ ಸಮಾಜಕ್ಕೆ ತೋರಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಇಬ್ಬರು ಜೋಡಿಗಳ ಬಗ್ಗೆ ಸಾಮಾಜೀಕ ಜಾಲತಾಣದಲ್ಲಿ ಸಾಕಷ್ಟು ಮದುವೆಯ ವದಂತಿಗಳು ಹರಿದಾಡುತಿದ್ದು, ಇದೆಲ್ದಕ್ಕೊ ನಟ-ನಟಿಯರಿಂದ ಅಧಿಕೃತ ಘೋಷಣೆಯಾದಾಗ ಮಾತ್ರ ಮದುವೆಯ ವಿಚಾರ ಖಚಿತವಾಗಲಿದೆ.

Previous articleಭಾರತ – ಅಮೆರಿಕಾ ಸಂಬಂಧ ವೃದ್ಧಿಯಲ್ಲಿ ಐತಿಹಾಸಿಕ ಹೆಜ್ಜೆ
Next articleಸಂಯುಕ್ತ ಕರ್ನಾಟಕದ ಉಳವಿ ಜಾತ್ರೆ ವಿಶೇಷ ಪುರವಣಿ ಬಿಡುಗಡೆ