SK Home Ad
Home ಸಿನಿ ಮಿಲ್ಸ್ ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ...

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ ಸುಂದರಿ!

0
28

ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ ಮೇಲೆ ಭಾರತೀಯ ಚಿತ್ರರಂಗದ ದಿವ್ಯ ಸೌಂದರ್ಯ ಐಶ್ವರ್ಯಾ ರೈ ಬಚ್ಚನ್, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಬಾರಿ ಕಾನ್ ಅಂಗಳಕ್ಕೆ ಬರುವುದಿಲ್ಲ ಎಂಬ ವದಂತಿಗಳಿಗೆ ಬ್ರೇಕ್ ಹಾಕಿ, ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಐಶ್ವರ್ಯಾ ರೈ ಧರಿಸಿದ್ದ ವಿಶೇಷ ಗೌನ್ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಖ್ಯಾತ ಭಾರತೀಯ ಫ್ಯಾಷನ್ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಈ ಕೌಚರ್ ಗೌನ್‌ಗೆ ‘ಲ್ಯೂಮಿನಾರಾ’ (Luminara) ಎಂದು ಹೆಸರಿಡಲಾಗಿದೆ. ಸಮುದ್ರದ ನೀಲಿ ಬಣ್ಣವನ್ನು ಹೋಲುವ ಈ ಉಡುಪನ್ನು, ಪ್ರಕೃತಿಯ ವಿನ್ಯಾಸಗಳಿಂದ ಪ್ರೇರಿತವಾದ ‘ಬಯೋಮಿಮಿಕ್ರಿ’ ಶೈಲಿಯಲ್ಲಿ ರೂಪಿಸಲಾಗಿದೆ. ಗೌನ್‌ನ ಭುಜದ ಭಾಗದಲ್ಲಿದ್ದ ರೆಕ್ಕೆಗಳ ವಿನ್ಯಾಸವು ನಟಿ ಐಶ್ವರ್ಯಾಗೆ ಆಕಾಶದ ದೇವತೆಯಂತಹ ವಿಶಿಷ್ಟ ಲುಕ್ ನೀಡಿತ್ತು.

ಗೌನ್‌ನ ವಿಶೇಷತೆಗಳು: ನಟಿ ಧರಿಸಿರು ಗೌನ್‌ನನ್ನು ತಯಾರಿಸಲು ಗರಿಷ್ಠ 1,500 ಗಂಟೆಗಳ ಪರಿಶ್ರಮ ಈ ಉಡುಪು ತೆಗೆದುಕೊಡಿದೆ. ಹಾಗೇ ಅತ್ಯಂತ ಜಾಗರೂಕತೆಯಿಂದ ಮಾನವ ಶ್ರಮದ ಮೂಲಕ ಇದನ್ನು ಸಿದ್ಧಪಡಿಸಲಾಗಿದೆ.

ಕ್ರಿಸ್ಟಲ್ ವೇನ್ ಎಂಬ್ರಾಯ್ಡರಿ: ಸಾವಿರಾರು ಹೊಳೆಯುವ ಕ್ರಿಸ್ಟಲ್ ಹರಳುಗಳನ್ನು ಬಳಸಲಾಗಿದ್ದು, ಐಶ್ವರ್ಯಾ ಪ್ರತಿ ಹೆಜ್ಜೆಯಲ್ಲೂ ಇವು ಬೆಳಕನ್ನು ಪ್ರತಿಫಲಿಸಿ ಮಿನುಗುತ್ತಿದ್ದವು ಎನ್ನುವಂತೆ ಕಾಣುತಿತ್ತು.

ಈ ಉಡುಪು ವಿನ್ಯಾಸದ ಉದ್ದೇಶ: ಬೆಳಕನ್ನು ಶಕ್ತಿ, ಚಲನೆ ಮತ್ತು ರೂಪಾಂತರದ ಸಂಕೇತವಾಗಿ ಬಳಸಿ ನಟಿ ಸುತ್ತ ಒಂದು ವಿಶಿಷ್ಟ ಶಕ್ತಿಯ ವಲಯವನ್ನು ಸೃಷ್ಟಿಸುವುದು ಡಿಸೈನರ್ ಉದ್ದೇಶವಾಗಿತ್ತು.

ಲೊರಿಯಲ್ ಪ್ಯಾರಿಸ್ ಸಂಸ್ಥೆಯ ಪ್ರಕಾರ, ಐಶ್ವರ್ಯಾ ಸೌಂದರ್ಯವನ್ನು ಈ ಬಾರಿ ‘ರಾಯಲ್ ಸಫೈರ್’ ಪರಿಕಲ್ಪನೆಯಡಿಯಲ್ಲಿ ಬಿಂಬಿಸಲಾಗಿತ್ತು. ಕ್ಲಾಸಿಕ್ ಗ್ಲಾಮರ್ ಜೊತೆಗೆ ಕಣ್ಣುಗಳಿಗೆ ನಿಖರವಾದ ಲೈನರ್ ಮತ್ತು ದಟ್ಟವಾದ ಮಸ್ಕರಾ ಬಳಸಿ ಆಕರ್ಷಕ ಲುಕ್ ನೀಡಲಾಗಿತ್ತು.

ನೀಲಿ ಬಣ್ಣದ ಗೌನ್‌ಗೆ ತದ್ವಿರುದ್ಧವಾಗಿ ಕೆಂಪು ಮಿಶ್ರಿತ ಕಂದು ಬಣ್ಣದ ಸ್ಯಾಟಿನ್ ಫಿನಿಶ್ ಲಿಪ್‌ಸ್ಟಿಕ್ ಬಳಸಲಾಗಿತ್ತು. ಕೂದಲನ್ನು ಮೃದುವಾದ ಅಲೆಗಳ ಮಾದರಿಯಲ್ಲಿ ಮುಕ್ತವಾಗಿ ಬಿಡಲಾಗಿತ್ತು. ಈ ಮೂಲಕ ಕಾನ್ ರೆಡ್ ಕಾರ್ಪೆಟ್‌ನ ಅಪ್ರತಿಮ ರಾಣಿ ಎಂಬುದನ್ನು ಐಶ್ವರ್ಯಾ ರೈ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.