SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಹೆಂಡತಿಯೊಂದಿಗೆ ಜಗಳ, ಬಾತ್‌ರೂಮ್‌ನಲ್ಲಿ ಪತಿ ಆತ್ಮಹತ್ಯೆ

ಹೆಂಡತಿಯೊಂದಿಗೆ ಜಗಳ, ಬಾತ್‌ರೂಮ್‌ನಲ್ಲಿ ಪತಿ ಆತ್ಮಹತ್ಯೆ

0
71

ಶಿರಸಿ: ಹೆಂಡತಿಯೊಂದಿಗೆ ನಡೆದ ಕಲಹದ ಬಳಿಕ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಎಸಳೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಎಲ್.ಕೆ. ಹೆಗಡೆ (56) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕಾನಗೋಡು ಗ್ರಾಮದವರಾಗಿದ್ದರು. ಸದ್ಯ ಎಸಳೆ ಗ್ರಾಮದಲ್ಲಿ ವಾಸವಾಗಿದ್ದು, ಅಡಿಕೆ ವ್ಯಾಪಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಪತಿ-ಪತ್ನಿಯ ನಡುವೆ ಕಲಹ ನಡೆದಿದ್ದು, ಬಳಿಕ ಎಲ್.ಕೆ. ಹೆಗಡೆ ಅವರು ಮನೆಯ ಬಾತ್‌ರೂಮ್‌ಗೆ ತೆರಳಿ ಕುತ್ತಿಗೆಗೆ ಬ್ಲೇಡ್‌ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಹಜರು ಪ್ರಕ್ರಿಯೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.