Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಪತ್ನಿ ಕಿರುಕುಳಕ್ಕೆ ವಿದೇಶದಿಂದ ಬಂದು ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕಿರುಕುಳಕ್ಕೆ ವಿದೇಶದಿಂದ ಬಂದು ಆತ್ಮಹತ್ಯೆಗೆ ಶರಣಾದ ಪತಿ

0
81

ಕಾರವಾರ: ಪತ್ನಿಯ ಮಾನಸಿಕ ಕಿರುಕುಳ ಹಾಗೂ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ ಮನನೊಂದ ಪತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಂಡೇಲಿ ನಗರದಲ್ಲಿ ನಡೆದಿದೆ.

​ದಾಂಡೇಲಿಯ ನಿವಾಸಿ ರಾಘವೇಂದ್ರ ವಾಡಕರ್ ಆತ್ಮಹತ್ಯೆಗೆ ಶರಣಾದ ದುರ್ದೈವಿ. ರಾಘವೇಂದ್ರ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದರು. ಕೇವಲ ಒಂದು ವಾರದ ಹಿಂದೆಯಷ್ಟೇ ಅವರು ಮಲೇಷ್ಯಾದಿಂದ ಸ್ವಗ್ರಾಮ ದಾಂಡೇಲಿಗೆ ಮರಳಿದ್ದರು.

​ರಾಘವೇಂದ್ರ ಅವರು ಊರಿಗೆ ಬರುತ್ತಿದ್ದಂತೆಯೇ, ಪತ್ನಿ ಮೇಘಾ ತನ್ನ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು. ಸಂಸಾರವನ್ನು ಮತ್ತೆ ಸರಿಪಡಿಸಿಕೊಳ್ಳುವ ಉದ್ದೇಶದಿಂದ ರಾಘವೇಂದ್ರ ಅವರು ಪತ್ನಿಯನ್ನು ಮನೆಗೆ ಬರುವಂತೆ ಕರೆದರೂ, ಆಕೆ ನಿರಾಕರಿಸಿದ್ದರು ಎನ್ನಲಾಗಿದೆ.

​ಮನನೊಂದ ರಾಘವೇಂದ್ರ ಅವರು ಪ್ರಾರಂಭದಲ್ಲಿ ಕೈ ಕೊಯ್ದುಕೊಂಡು ಪತ್ನಿಗೆ ವಾಟ್ಸಾಪ್ ಮಾಡಿದ್ದರು. ಅದಕ್ಕೂ ಕರಗದ ಪತ್ನಿ, ನೀನು ಸತ್ತರೂ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

ಇದರಿಂದ ಸಂಪೂರ್ಣವಾಗಿ ಧೃತಿಗೆಟ್ಟ ರಾಘವೇಂದ್ರ, ಪತ್ನಿಯ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.