ಹರಿಯಾಣ : ಭಾರತವು ಹಸಿರು ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಚಾಲಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಸಿರು ನಿಶಾನೆ ತೋರಿದರು. ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವಿನ ಈ ರೈಲು ಸೇವೆ ದೇಶವನ್ನು ಹೈಡ್ರೋಜನ್ ಚಾಲಿತ ರೈಲು ವ್ಯವಸ್ಥೆ ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಸೇರಿಸಿದೆ.
ಜಿಂದ್‌ನ ಏಕಲವ್ಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ: ‘3 Idiots’ ನ ರಾಂಚೊ ಪಾತ್ರಕ್ಕೆ ವಾಂಗ್‌ಚುಕ್ ಸ್ಫೂರ್ತಿ ಅಲ್ಲ : ಆಮಿರ್
ಭಾರತದ ಮೊದಲ ಹೈಡ್ರೋಜನ್ ರೈಲು ವಿಶೇಷತೆ ಏನು? : ಜಿಂದ್-ಸೋನಿಪತ್ ವಿಭಾಗದಲ್ಲಿ ಸಂಚರಿಸಲಿರುವ 10 ಬೋಗಿಗಳ ಈ ರೈಲು ಸುಮಾರು 90 ಕಿಲೋಮೀಟರ್ ದೂರವನ್ನು ಎರಡು ಗಂಟೆಗಳಲ್ಲಿ ಕ್ರಮಿಸಲಿದೆ. ಈ ರೈಲಿನ ಪ್ರಮುಖ ವಿಶೇಷತೆಗಳು ಒಳಗೊಂಡಿದ್ದು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. 3,200 ಹಾರ್ಸ್ ಪವರ್ (HP) ಸಾಮರ್ಥ್ಯದ ಪ್ರೊಪಲ್ಷನ್ ವ್ಯವಸ್ಥೆ. ಕಾರ್ಯಾಚರಣೆಯಲ್ಲಿ ಶೂನ್ಯ ಕಾರ್ಬನ್ ಹೊರಸೂಸುವಿಕೆ. ಉಪ-ಉತ್ಪನ್ನವಾಗಿ ನೀರಿನ ಆವಿ ಮಾತ್ರ ಹೊರಬಿಡುತ್ತದೆ.
ಡೀಸೆಲ್ ಬಳಕೆಯ ಅಗತ್ಯವಿಲ್ಲ. ಕಡಿಮೆ ಶಬ್ದದೊಂದಿಗೆ ಕಾರ್ಯನಿರ್ವಹಣೆ. ನಿರಂತರ ವಿದ್ಯುದೀಕರಣದ ಅವಶ್ಯಕತೆ ಇಲ್ಲ. ಹೈಡ್ರೋಜನ್ ಇಂಧನ ಕೋಶದ ಮೂಲಕ ರೈಲು ತನ್ನದೇ ವಿದ್ಯುತ್ ಅನ್ನು ಉತ್ಪಾದಿಸಿಕೊಳ್ಳುವುದರಿಂದ ಇದು ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್
ಹಸಿರು ಚಲನಶೀಲತೆಯತ್ತ ಭಾರತದ ಮಹತ್ವದ ಹೆಜ್ಜೆ : ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಕಲ್ಲಿದ್ದಲು, ಡೀಸೆಲ್ ಮತ್ತು ವಿದ್ಯುದೀಕರಣದ ನಂತರ ಇದೀಗ ಹೈಡ್ರೋಜನ್ ಆಧಾರಿತ ಸಾರಿಗೆ ವ್ಯವಸ್ಥೆ ಹೊಸ ಮೈಲಿಗಲ್ಲಾಗಿದೆ. ಈ ಯೋಜನೆಯು ದೇಶದ ಹಸಿರು ಇಂಧನ ನೀತಿ ಹಾಗೂ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಗೆ ಮಹತ್ವದ ಕೊಡುಗೆ ನೀಡಲಿದೆ.
₹12,470 ಕೋಟಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ: ಪ್ರಧಾನಿ ಮೋದಿ ಹರಿಯಾಣದಲ್ಲಿ ₹12,470 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು. ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ಸುಮಾರು ₹9,680 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 157.92 ಕಿ.ಮೀ. ಉದ್ದದ ಈ ಕಾರಿಡಾರ್ ದೆಹಲಿ-ಕತ್ರಾ ಪ್ರಯಾಣದ ಸಮಯವನ್ನು 14 ಗಂಟೆಯಿಂದ 6 ಗಂಟೆಗೆ ಇಳಿಸಲಿದೆ.
ಇದನ್ನೂ ಓದಿ: ಬೆಂಗಳೂರು: ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಚೀಟಿ ಪತ್ತೆ
ದೆಹಲಿ-ಅಮೃತಸರ ಪ್ರಯಾಣವನ್ನು 8 ಗಂಟೆಯಿಂದ 4 ಗಂಟೆಗೆ ಕಡಿಮೆ ಮಾಡಲಿದೆ. ಶ್ರೀ ಮಾತಾ ವೈಷ್ಣೋ ದೇವಿ ಯಾತ್ರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಕೈಗಾರಿಕೆ ಹಾಗೂ ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಜಿಂದ್-ಗೋಹಾನ ಗ್ರೀನ್‌ಫೀಲ್ಡ್ ಹೆದ್ದಾರಿ 40.60 ಕಿ.ಮೀ. ಉದ್ದದ ಈ ಹೆದ್ದಾರಿಯು ಜಿಂದ್ ಮತ್ತು ಗೋಹಾನ ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಯಿಂದ ಕೇವಲ 40 ನಿಮಿಷಗಳಿಗೆ ಇಳಿಸಲಿದೆ.
ಅಂಬಾಲಾ-ಕಲಾ ಅಂಬ್ ಹೆದ್ದಾರಿ : ಈ ಯೋಜನೆಯು ಹರಿಯಾಣ ಮತ್ತು ಹಿಮಾಚಲ ಪ್ರದೇಶದ ನಡುವಿನ ಸಂಪರ್ಕವನ್ನು ಬಲಪಡಿಸಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ನೆರವಾಗಲಿದೆ.
ಸಿಖ್ ವಸ್ತುಸಂಗ್ರಹಾಲಯಕ್ಕೆ ಅಡಿಪಾಯ : ಕುರುಕ್ಷೇತ್ರದಲ್ಲಿ ಸಿಖ್ ಸಮುದಾಯದ ಇತಿಹಾಸ, ಗುರುಗಳ ಬೋಧನೆಗಳು ಮತ್ತು ಅವರ ತ್ಯಾಗಗಳನ್ನು ಪರಿಚಯಿಸುವ ಸಿಖ್ ವಸ್ತುಸಂಗ್ರಹಾಲಯ ನಿರ್ಮಾಣಕ್ಕೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.




















