SK Home Ad
Home ನಮ್ಮ ಜಿಲ್ಲೆ ಉಡುಪಿ ಮಿಸ್ ಯುನಿವರ್ಸ್ ಇಂಡಿಯಾ: ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ

ಮಿಸ್ ಯುನಿವರ್ಸ್ ಇಂಡಿಯಾ: ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ

0
50

ಉಡುಪಿ: ಸಾಮಾನ್ಯ ಕುಟುಂಬದ ಹಿನ್ನೆಲೆಯ ಉಡುಪಿಯ ಸ್ಫೂರ್ತಿ ಶೆಟ್ಟಿ ಅವರು ವೈರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲೇ ಹುಟ್ಟಿ ಬೆಳೆದು, ಇಲ್ಲೇ ಶಿಕ್ಷಣ ಪೂರೈಸಿರುವ ಚೆಲುವೆ ಸ್ಫೂರ್ತಿ ಶೆಟ್ಟಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 16ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧಾಲೋಕಕ್ಕೆ ಕಾಲಿಟ್ಟಿದ್ದು, 2018ರಿಂದ ಹಲವು ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. 2020ರಲ್ಲಿ ಕ್ವೀನ್ ಆಫ್ ಕರ್ನಾಟಕ ಕಿರೀಟ ಪಡೆದಿದ್ದು, 2021ರಲ್ಲಿ ಮಿಸ್ ಇಂಟರ್ ನ್ಯಾಷನಲ್ ಯುನಿವರ್ಸ್‌ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದೆ. 2024ರಲ್ಲಿ ಮಿಸ್ ಗ್ರಾಂಡ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 2025ರಲ್ಲಿ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು.

ಜುಲೈ 18ರಿಂದ ಆಗಸ್ಟ್‌ 23ರ ವರೆಗೆ ಗುಜರಾತ್‌ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ವೈರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದು, ಟಾಪ್ 50ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು. ಅಂತಿಮ ಸ್ಪರ್ಧೆ ಆ. 23ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಎಂದರು.