SK Home Ad
Home ನಮ್ಮ ಜಿಲ್ಲೆ ವಿಜಯಪುರ ಟಿಪ್ಪರ್-ಬೈಕ್ ಅಪಘಾತ: ಇಬ್ಬರು ಬೈಕ್ ಸವಾರರ ಸಾವು

ಟಿಪ್ಪರ್-ಬೈಕ್ ಅಪಘಾತ: ಇಬ್ಬರು ಬೈಕ್ ಸವಾರರ ಸಾವು

0
85

ವಿಜಯಪುರ: ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮರಗೂರ ಬಳಿ ನಡೆದಿದೆ.

ಚಡಚಣ ತಾಲೂಕಿನ ಮರಗೂರ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಈ ಭೀಕರ ಘಟನೆ ನಡೆದಿದ್ದು, ಬೈಕ್ ಸವಾರರಾದ ಧರ್ಮಣ್ಣಾ ಹೊಸಮನಿ (41) ಬೀರಪ್ಪ ಪೂಜಾರಿ (25) ಮೃತಪಟ್ಟಿದ್ದಾರೆ.

ಮೃತರು ಇಂಡಿ ತಾಲೂಕಿನ ಗೋರನಾಳ ಗ್ರಾಮದವರು ಎಂದು ತಿಳಿದುಬಂದಿದ್ದು ಸ್ಥಳಕ್ಕೆ ಝಳಕಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.