SK Home Ad
Home ನಮ್ಮ ಜಿಲ್ಲೆ ವಿಜಯಪುರ ಸಿದ್ದರಾಮಯ್ಯ ಪಶ್ಚಾತ್ತಾಪ ಪಡಬೇಕಾಗುತ್ತದೆ

ಸಿದ್ದರಾಮಯ್ಯ ಪಶ್ಚಾತ್ತಾಪ ಪಡಬೇಕಾಗುತ್ತದೆ

0
46

ವಿಜಯಪುರ: ಮುಸ್ಲಿಂರ ಓಲೈಕೆಯಿಂದ ಸಿದ್ದರಾಮಯ್ಯ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು. ಇದಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣ ಅತಿರೇಕ ಮಾಡಿದರು. ಮಮತಾ ಬ್ಯಾನರ್ಜಿ ಬಿಟ್ಟರೆ ಸಿದ್ದರಾಮಯ್ಯ ಅತಿ ಹೆಚ್ಚು ಮುಸ್ಲಿಂ ತುಷ್ಟೀಕರಣ ಮಾಡಿದವರಾಗಿದ್ದಾರೆ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಿದರು. ಹಿಂದುಳಿದವರು, ದಲಿತರನ್ನು ನೋಡಲೇ ಇಲ್ಲ. ಹೀಗಾಗಿ ಎಲ್ಲರ ಅನುಕಂಪ ಕಳೆದುಕೊಂಡರು. ಒಬ್ಬೇ ಒಬ್ಬ ಮುಸ್ಲಿಮರು ಸಿದ್ದರಾಮಯ್ಯರನ್ನು ಕೆಳಗಿಳಿಸಿದ್ದಕ್ಕೆ ಪ್ರತಿಭಟನೆ ಮಾಡಿಲ್ಲ. ಕಾಂಗ್ರೆಸ್ ಮಾಡಿದ್ದು ತಪ್ಪು ಎಂದು ಹೇಳಲಿಲ್ಲ. ಸಿದ್ದರಾಮಯ್ಯ ವಿಚಾರದಲ್ಲಿ ಮುಸ್ಲಿಮರ ಬಗ್ಗೆ ಅಂಬೇಡ್ಕರರು ಹೇಳಿದ್ದು ಸತ್ಯವಾಯ್ತು ಎಂದರು.

ಇದು ಯಡಿಯೂರಪ್ಪ, ಸಿದ್ದರಾಮಯ್ಯ ಯುಗಾಂತ್ಯ. ಮಕ್ಕಳು ಸ್ವಂತ ಸಾಮರ್ಥ್ಯದ ಮೇಲೆ ಬೆಳೆಯಬೇಕು, ಅಪ್ಪನ ಮೇಲೆ ಬೆಳೆಯೋದು ಬಿಡಬೇಕು. ಸಿದ್ದರಾಮಯ್ಯಗೆ ಮುಂದೆ ಒಳ್ಳೆಯದಾಗಲಿ. ಒಂದಿಷ್ಟು ಒಳ್ಳೆಯ ಕೆಲಸವನ್ನು ಮಾಡಿರುತ್ತಾರೆ. ಸಿದ್ದರಾಮಯ್ಯಗೆ ಶುಭ ವಿದಾಯ ಹೇಳ್ತೇವೆ ಎಂದು ಹೇಳಿದರು.