ಬಿಟಿಡಿಎ ನೌಕರನಿಗೆ ಚಪ್ಪಲಿ ಏಟು: ರೈತನ ಬಂಧನ

ಬಾಗಲಕೋಟೆ: ಬಿಟಿಡಿಎ ಸಿಬ್ಬಂದಿ ನೀಲಕಂಠ ಅಂಕದ ಅವರಿಗೆ ಚಪ್ಪಲಿಯಿಂದ ಹೊಡೆದಿರುವ ರೈತ ಬಸಪ್ಪ ದೊಡ್ಡಮನಿಯನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ನಡೆದ ದಿನ ಶನಿವಾರ ಆತನನ್ನು ಠಾಣೆಗೆ ಕರೆಯಿಸಿ ನವನಗರ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಅವರ ಮೇಲೆ ದಾಖಲಾಗಿರುವ ಸೆಕ್ಷನಗಳ ಅಡಿಯಲ್ಲಿ ಠಾಣೆಯಲ್ಲೇ ಜಾಮೀನು ಮಂಜೂರು ಮಾಡಲು ಅವಕಾಶವಿದ್ದಿದ್ದರಿಂದ ಆತನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಸೋಮವಾರ ಪ್ರಾಧಿಕಾರದ ಅಧಿಕಾರಿಗಳು ಧರಣಿ ನಡೆಸಿದ್ದರ ಪರಿಣಾಮ ಆತನನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. … Continue reading ಬಿಟಿಡಿಎ ನೌಕರನಿಗೆ ಚಪ್ಪಲಿ ಏಟು: ರೈತನ ಬಂಧನ