SK Home Ad
Home ನಮ್ಮ ಜಿಲ್ಲೆ ಮೈಸೂರು ಬಿಡದಿ ಟೌನ್‌‌ಶಿಪ್: ಚರ್ಚೆ ನಡೆಸುವುದಾದರೆ ವಿಧಾನಸೌಧಕ್ಕೆ ಬರಲಿ

ಬಿಡದಿ ಟೌನ್‌‌ಶಿಪ್: ಚರ್ಚೆ ನಡೆಸುವುದಾದರೆ ವಿಧಾನಸೌಧಕ್ಕೆ ಬರಲಿ

0
35

ಮೈಸೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚರ್ಚೆ ನಡೆಸುವುದಾದರೆ ವಿಧಾನಸೌಧಕ್ಕೆ ಬರಲಿ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆಹ್ವಾನಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ಪತ್ರ ಬರೆದಿದ್ದಾರೆ. ಮಾತುಕತೆ ಆಗಬೇಕು ಎಂದಾದರೆ ವಿಧಾನಸೌಧಕ್ಕೆ ಬರಬೇಕು. ಸರ್ಕಾರ ನಡೆಯುವ ಜಾಗದಲ್ಲಿ ಚರ್ಚೆ ಆಗಬೇಕು. ಬೀದಿಯಲ್ಲಿ ಕುಳಿತು ಚರ್ಚಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಸರಿಯಾದ ಸ್ಥಳಕ್ಕೆ ಅವರನ್ನು ಕರೆದಿದ್ದಾರೆ. ನಿಜವಾಗಿಯೂ ಕುಮಾರಸ್ವಾಮಿ ಅವರ ವಾದದಲ್ಲಿ ಶಕ್ತಿ ಇದ್ದರೆ ಅಲ್ಲಿಗೇ ಬರಲಿ ಎಂದು ಸವಾಲು ಹಾಕಿದರು.

ಬಿಡದಿಯಲ್ಲಿ ನಡೆದಿರುವ ಹೋರಾಟದಿಂದ ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಆ ಯೋಜನೆಗೆ ಕೆಲ ರೈತರಷ್ಟೇ ವಿರೋಧ ಮಾಡುತ್ತಿದ್ದಾರೆ. ಅಲ್ಲಿನ ಹಲವು ರೈತರು ಟೌನ್‌ಶಿಪ್ ಪರವಿದ್ದಾರೆ. ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ಖುಷಿಯಲ್ಲಿದ್ದಾರೆ. ಕುಮಾರಸ್ವಾಮಿಯವರೇ ಭೂಸ್ವಾಧೀನ ಮಾಡಿರುವುದು. ಬಿಡದಿ ಟೌನ್‌ಶಿಪ್ ಜನರ ಪರವಾಗಿದ್ದು, ಸರ್ಕಾರ ಟೌನ್‌ಶಿಪ್ ಮಾಡುತ್ತದೆ ಎಂದು ಹೇಳಿದರು.