ಹಾವೇರಿ (ಶಿಗ್ಗಾವಿ): ಮಳೆ ಗಾಳಿಯ ರಭಸಕ್ಕೆ ಮೊಬೈಲ್ ಟವರ್ ಲಾರಿ ಮೇಲೆ ಬಿದ್ದ ಪರಿಣಾಮ ಲಾರಿ ಚಾಲಕ ಗಾಯಗೊಂಡ ಘಟನೆ ಶಿಗ್ಗಾವಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಶ್ಯಾಡಂಬಿ ಗ್ರಾಮದ ಹತ್ತಿರ ಸೋಮವಾರ ಸಂಜೆ ಜರುಗಿದೆ.
ಅತಿಯಾದ ರಭಸದ ಗಾಳಿಗೆ ಟವರ್ ಮುಗುಚಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಟವರ್ ಇದ್ದ ಕಾರಣ ಅದೇ ವೇಳೆಯಲ್ಲಿ ಲಾರಿಯೊಂದು ಬಂದ ಪರಿಣಾಮ ಲಾರಿಯ ಮೇಲೆ ಟವರ್ ಬಿದ್ದು ಲಾರಿ ಚಾಲಕ ಸಿಲುಕಿ, ಚಾಲಕನ ಕೈನ ಮುಂಗೈ ಬೆರಳು ಕಟ್ ಆಗಿದ್ದು ಜೊತೆಗೆ ಸಣ್ಣ ಸಣ್ಣ ಗಾಯಗಳಾಗಿವೆ.
ಚಾಲಕನನ್ನ ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ತಡಸ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.






















