SK Home Ad
Home ನಮ್ಮ ಜಿಲ್ಲೆ ಹಾವೇರಿ ನೆಹರು ಪ್ರಧಾನಿ ಆಸೆಗಾಗಿ ಭಾರತ ವಿಭಜನೆ

ನೆಹರು ಪ್ರಧಾನಿ ಆಸೆಗಾಗಿ ಭಾರತ ವಿಭಜನೆ

0
53

ಹಾವೇರಿ: ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ಒಬ್ಬ ಚಿಂತಕರಾಗಿದ್ದರು. ಅವರು ಅಖಂಡ ಭಾರತದ ಪರಿಕಲ್ಪನೆ ಇಟ್ಟುಕೊಂಡು ಹೋರಾಟ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲೆಯ ವತಿಯಿಂದ ಏರ್ಪಡಿಸಿದ ಎಸ್.ಐ.ಆರ್ ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.

ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ನೆಹರೂ ಅವರ ಮೊದಲನೇ ರಾಷ್ಟ್ರೀಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ರಾಷ್ಟ್ರೀಯ ಸರ್ಕಾರ ಅಂತ ಅಂದರೆ 1952 ರ ಪೂರ್ವದಲ್ಲಿ ಅದು ಚುನಾಯಿತ ಸರ್ಕಾರ ಇರಲಿಲ್ಲ. ದೇಶದ ವಿವಿಧ ಭಾಗದಲ್ಲಿ ಇರುವಂತಹ ಅತ್ಯಂತ ಪ್ರಭಾವಿ ಚಿಂತಕರು ಮತ್ತು ದೇಶದ ಬಗ್ಗೆ ಸಂಪೂರ್ಣವಾಗಿ ಎಲ್ಲಾ ರೀತಿಯ ವಿಚಾರಗಳನ್ನು ತಿಳಿದುಕೊಂಡು ಹೋಗಿರುವಂತಹ ಮೇಧಾವಿಗಳಿಗೆ ಅಲ್ಲಿ ಕ್ಯಾಬಿನೆಟ್ ದರ್ಜೆ ಕೊಟ್ಟಿತ್ತು.

ಅದರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಇದ್ದರು. ಸೋಶಿಯಲಿಸ್ಟ್ ಪಾರ್ಟಿಯ ಜನರು ಇದ್ದರು. ಕಮ್ಯುನಿಸ್ಟ್ ಪಾರ್ಟಿಯ ಡಾಂಗೆ ಅಂತಹ ಮೇಧಾವಿಗಳ ಕ್ಯಾಬಿನೆಟ್‌ನಲ್ಲಿ ಬಂಗಾಳದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಇಡೀ ಭಾರತದ ಒಂದು ಕಲ್ಪನೆಯನ್ನು ಇಟ್ಟುಕೊಂಡು ಅವರು ಹೋರಾಟವನ್ನು ಮಾಡಿದ್ದರು ಮತ್ತು ಆ ಚಿಂತಕರಾಗಿದ್ದರು ಎಂದರು.

ಅಖಂಡ ಭಾರತದ ಕಲ್ಪನೆ ಇರುವಂತವರು ಬಹಳಷ್ಟು ಚಿಂತನೆಯನ್ನು ಮಾಡಲು ಶುರು ಮಾಡಿದರು. ಅಖಂಡ ಭಾರತ ಅಂತ ಅಂದರೆ ಈಗೇನು ಪಾಕ್ ಆಕ್ರಮಿತ ಕಾಶ್ಮೀರ್ ಅಂತ ಕರೆಯುತ್ತಾರೆ, ಅಲ್ಲಿಂದ ಹಿಡಿದು ಭೂತಾನ್ ಬರ್ಮಾವರೆಗೂ ಅಖಂಡ ಭಾರತ, ನೇಪಾಳ್ ಸಮೇತ. ಮತ್ತು ದಕ್ಷಿಣದಲ್ಲಿ ಶ್ರೀಲಂಕಾ ಸಮೇತ. ಇವತ್ತಿಗೂ ಎಲ್ಲಾ ದೇಶದಲ್ಲಿ ನಮ್ಮ ಆದಿ ಸಂಸ್ಕೃತಿ ಮತ್ತು ದೇವರು ದೇವಸ್ಥಾನದ ಪೂಜೆ ಆಗುತ್ತಿದೆ ಎಂದರು.

​ಶ್ರೀರಾಮಚಂದ್ರನ ಪೂಜೆ ಶ್ರೀಲಂಕಾದಲ್ಲೂ ಆಗುತ್ತೆ, ನೇಪಾಳದಲ್ಲೂ ಆಗುತ್ತದೆ, ಭೂತಾನದಲ್ಲೂ ಆಗುತ್ತದೆ. ಬುದ್ಧನ ಒಂದು ಪ್ರಾರ್ಥನೆ ಅಫ್ಘಾನಿಸ್ತಾನದಲ್ಲೂ ಆಗುತ್ತದೆ‌. ಪಾಕ್ ಆಕ್ರಮಿತ ಕಾಶ್ಮೀರದಲ್ಲಂತೂ ಸಾವಿರಾರು ಹಿಂದೂ ದೇವಸ್ಥಾನಗಳಿವೆ. ​ಆದರೆ ವಿಭಜನೆ ಮಾಡುವಾಗ ರಾಜಿ ಪಂಚಾಯಿತಿ ಮಾಡಿ, ಕಾಂಗ್ರೆಸ್ಸಿನ ನಾಯಕರು ವಿಶೇಷವಾಗಿ ಜವಾಹರಲಾಲ್ ನೆಹರು ಅವರು ಕೂಡಲೇ ವಿಭಜನೆಯಾಗಿ ವಿಭಜಿತ ಭಾರತದ ಪ್ರಧಾನಮಂತ್ರಿಯಾಗುವಂತಹ ಒಂದು ಮಹದಾಸೆಯಿಂದ ಅದನ್ನ ರಾಜಿ ಪಂಚಾಯಿತಿ ಮಾಡಿ ವಿಭಜನೆ ಆಯಿತು, ಸ್ವತಂತ್ರ ಬಂತು. ​ಆದರೆ, ಅಖಂಡ ಭಾರತ ಆಗಿಲ್ಲ ಅನ್ನುವಂತಹ ಚಿಂತನೆ ಇರುವಂತವರು ವಿಶೇಷವಾಗಿ ಕಾಶ್ಮೀರ ಭಾರತಕ್ಕೆ ಸೇರಿರುವಂತದ್ದು.

ಹಿಂದುಕುಶ್ ಮೌಂಟನ್ ಅಂತ, ಹಿಂದುಕುಶ್ ಮೌಂಟನ್ ಅಂದರೆ ಅಫ್ಘಾನಿಸ್ತಾನ. ಈಗಲೂ ಕೂಡ ಹಿಂದುಕುಶ್ ಪಾಸ್ ಅಂತ ಇದೆ. ನಾವು ಭಾರತದಿಂದ ಪಾಕಿಸ್ತಾನ ಮುಖಾಂತರ ಅಫ್ಘಾನಿಸ್ತಾನಕ್ಕೆ ಹೋದರೆ ಹಿಂದುಕುಶ್ ಪಾಸ್ ಇದೆ. ​ಈ ಕಲ್ಪನೆಯನ್ನು ಇಟ್ಟುಕೊಂಡು ಹೋರಾಟ ಪ್ರಾರಂಭವಾಯಿತು. ಆಗ ಕಾಶ್ಮೀರಕ್ಕೆ ಹೋಗಬೇಕಾದರೆ ಪರ್ಮಿಟ್ ಬೇಕಾಗಿತ್ತು. ​ಆ ಪರ್ಮಿಟ್ ಇಲ್ಲದೆ ನಾನು ಹೋಗುತ್ತೇನೆ ಯಾಕಂದರೆ ನಮ್ಮ ದೇಶದಲ್ಲಿ ನಮಗೆ ಯಾಕೆ ಪರ್ಮಿಟ್ ಬೇಕು ಅಂತ ಹೇಳಿ, ಶಾಮ್ ಪ್ರಸಾದ್ ಮುಖರ್ಜಿ ಉಲ್ಲಂಘನೆ ಮಾಡುವಂತಹ ಚಳುವಳಿ ಮಾಡಿ ಪರ್ಮಿಟ್ ಇಲ್ಲದೆ ಒಳಗಡೆ ಹೋದರು, ಅವರನ್ನು ಬಂಧಿಸಿ ಜೈಲಿಗೆ ಹಾಕಿದ ಮೇಲೆ ಆರು ತಿಂಗಳ ನಂತರ ಅವರಿಗೆ ಆರೋಗ್ಯ ಚೆನ್ನಾಗಿಲ್ಲ ಅಂತ ಸುದ್ದಿ ಬಂತು. ಅವರನ್ನು ಜೈಲಿನಲ್ಲಿ ಒಂದು ರೀತಿಯಲ್ಲಿ ಹೋಮಿಸೈಡ್ ಮಾಡಿ, ಸಾವನ್ನು ಒಪ್ಪುವ ರೀತಿಯಲ್ಲಿ ಅವರಿಗೆ ಕೊಲೆ ಮಾಡಿದರು ಎಂದು ಹೇಳಿದರು.

ಇಂದಿಗೂ ದಾರಿದೀಪ: ​”ಈ ರೀತಿ ಸನ್ನಿವೇಶದಲ್ಲಿ 1951 ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘದ ಸ್ಥಾಪಿಸಿ ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವಂತಹ ಶ್ರೇಷ್ಠ ನಾಯಕ. ಅವರ ವಿಚಾರ ಮತ್ತು ಅವರ ಆದರ್ಶಗಳು ಇಂದು ಕೂಡ ನಮಗೆ ದಾರಿದೀಪವಾಗಿದ್ದಾವೆ. ಆ ದಾರಿದೀಪ ಮುಂದಿನ ಪೀಳಿಗೆಗೂ ಕೂಡ ಇರಬೇಕು ಅನ್ನುವ ಕಾರಣಕ್ಕಾಗಿ ಈ ಜನ್ಮದಿನಾಚರಣೆಯನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಇದನ್ನು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ನಾವು ಮಾಡಬೇಕಾಗಿ ತಮ್ಮೆಲ್ಲರಿಗೂ ವಿನಂತಿಯನ್ನು ಮಾಡುತ್ತೇನೆ. ಅವರ ವಿಚಾರಧಾರೆಗಳನ್ನು ಓದಿ ತಿಳ್ಕೊಂಡು, ಅನುಷ್ಠಾನ ನಿಮ್ಮ ಬದುಕಿನಲ್ಲಿ ಮಾಡಿದರೆ ಅದು ಸಾರ್ಥಕತೆ ಆಗುತ್ತದೆ. ಅವರ ಜನ್ಮದಿನಾಚರಣೆ ಸಾರ್ಥಕ ಆಗಲಿ ಅಂತ ನಾನು ಹಾರೈಸುತ್ತೇನೆ ಎಂದರು.