ಹಾವೇರಿ (ರಟ್ಟೀಹಳ್ಳಿ): ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕರು ಬೀದಿ ಬದಿ ವ್ಯಾಪಾರಿಯ ಮೇಲೆ ತೀವ್ರ ಹಲ್ಲೆ ಮಾಡಿದಾಗ ವ್ಯಾಪಾರಿ ಶಿವಾಜಿರಾವ ಭೈರೋಜಿ ಎಂಬಾತ ಸಾವನ್ನಪ್ಪಿದ ಘಟನೆ ಮಳಗಿ ರಸ್ತೆ ಕ್ರಾಸ್ ಬಳಿ ನಡೆದಿದೆ.
ಸಂಜೆ ಮೊಟ್ಟೆ ವ್ಯಾಪಾರಕ್ಕಾಗಿ ಶಿವಾಜಿರಾವ ಅಂಗಡಿಗೆ ಬಂದಾಗ ಕೆಲ ಯುವಕರು ಮೊಟ್ಟೆ ಖರೀದಿಸಿ 100 ರೂ. ಕೊಟ್ಟು, ಮರಳಿ ಚಿಲ್ಲರೆ ಪಡೆಯುವಾಗ 500 ರೂ. ಹಣ ಕೊಟ್ಟಿದ್ದೇನೆಂದು ವಾದಕ್ಕಿಳಿದರು. ಶಿವಾಜಿರಾವ ಮಗ ಭರತನ ಜೊತೆ ಜಗಳ ಪ್ರಾರಂಭವಾದಾಗ, ತಂದೆ ಮಧ್ಯೆಪ್ರವೇಶಿಸಿದರು. ಆಗ ಯುವಕರ ಗುಂಪು ಶಿವಾಜಿರಾವ ಮೇಲೆ ಹಲ್ಲೆ ನಡೆಸಿದ್ದು ಅವರು ಮೃತಪಟ್ಟಿದ್ದಾರೆ.
ಯುವಕರಾದ ವಾಸೀಂ ವಜೀರಸಾಬ ಮುಲ್ಲಾ, ಸಾಧಿಕ ವಜೀರಸಾಬ ಮುಲ್ಲಾ, ಸರ್ಫರಾಜ ವಜೀರಸಾಬ ಮುಲ್ಲಾ, ಸಿರಾಜ ವಜೀರಸಾಬ ಮುಲ್ಲಾ ಎಂಬವರ ಮೇಲೆ ರಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















