SK Home Ad
Home ನಮ್ಮ ಜಿಲ್ಲೆ ಗದಗ ಇಂಜಿನ್‌ಲ್ಲಿ ತಾಂತ್ರಿಕ ದೋಷ, ಗದಗ ಕಣಗಿನಹಾಳ ಬಳಿ ನಿಂತ ರೈಲು..!

ಇಂಜಿನ್‌ಲ್ಲಿ ತಾಂತ್ರಿಕ ದೋಷ, ಗದಗ ಕಣಗಿನಹಾಳ ಬಳಿ ನಿಂತ ರೈಲು..!

0
147

ಗದಗ: ಇಂಜಿನ್‌ದಲ್ಲಿ ದೋಷ ಕಂಡು ಬಂದಿದ್ದರಿಂದ ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಬಳಿ ಯಶವಂತಪುರ-ವಿಜಯಪುರ ರೈಲು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಿಲುಗಡೆಯಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

ಈ ರೈಲು ರಾತ್ರಿ 7.30ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 6ಕ್ಕೆ ಗದಗ ಮೂಲಕ 11ಕ್ಕೆ ವಿಜಯಪುರ ತಲುಪಬೇಕಿತ್ತು. ಎರಡು ಗಂಟೆಗೂ ಹೆಚ್ಚು ಕಾಲ ರೈಲು ನಿಂತಲ್ಲೇ ನಿಂತಿದ್ದರಿಂದ ರೈಲಿನಲ್ಲಿದ್ದ ಚಿಕ್ಕ ಮಕ್ಕಳು ಹಾಲು, ಆಹಾರ ದೊರೆಯದೇ ಪರಾದಾಡಿದವು.

ಕೊಪ್ಪಳದ ತಳಕಲ್ ಬಳಿ ಇಂಜಿನಲ್ಲಿ ದೋಷ ಕಂಡು ಬಂದ ಬಗ್ಗೆ ರೈಲು ಚಾಲಕನಿಗೆ ಮಾಹಿತಿ ದೊರೆತಿದೆ. ಗದಗವರೆಗೂ ತಲುಪಬಹುದೆಂಬ ಭರವಸೆಯೊಂದಿಗೆ ರೈಲನ್ನು ಚಾಲಕ ಓಡಿಸಿದ್ದಾನೆ. ತಳಕಲ್ ಬಿಟ್ಟು ಸ್ವಲ್ಪ ದೂರ ಕ್ರಮಿಸಿ ಕಣಗಿನಹಾಳ ಬಳಿ ರೈಲು ನಿಂತಿತೆಂದು ಮೂಲಗಳೂ ತಿಳಿಸಿವೆ.

ರೈಲು ತಾಂತ್ರಿಕ ದೋಷದಿಂದ ನಿಂತಿದ್ದರಿಂದ ಗದಗ, ಬಾಲಕೋಟೆ, ವಿಜಯಪುರ ತಲುಪಬೇಕಿದ್ದ ಪ್ರಯಾಣಿಕರು ಅತ್ತ ಊರು ತಲುಪದೇ ಇತ್ತ ತಿನ್ನಲು ಏನೂ ದೊರೆಯದೇ ಪರಿತಪಿಸಿದರು. ಗದಗವರೆಗೆ ಸಂಚರಿಸಬೇಕಾಗಿದ್ದ ಕೆಲ ಪ್ರಯಾಣಿಕರು ತಮ್ಮ ಮನೆಗೆ ದೂರವಾಣಿ ಮೂಲಕ ಸಂಪರ್ಕಿಸಿ ದ್ವಿಚಕ್ರ ವಾಹನ, ಕಾರಿನ ಮೂಲಕ ತೆರಳಿದರು.

ಸುಮಾರು ಎರಡು ಗಂಟೆಗಳ ನಂತರ ಗದಗನಿಂದ ಪ್ರತ್ಯೇಕ ಇಂಜಿನ್ ತರಿಸಿ ರೈಲು ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಯಿತು. ತಾಂತ್ರಿಕ ದೋಷದಿಂದ ರೈಲು ನಿಂತಿದ್ದರಿಂದ ಹಂಪಿ, ಅಮರಾವತಿ ಎಕ್ಸ್‌ಪ್ರೆಸ್ ರೈಲುಗಳು ಸುಮಾರು ಎರಡು ಗಂಟೆ ವಿಳಂಬವಾಗಿ ಸಂಚರಿಸಿವೆಯೆಂದು ಮೂಲಗಳು ತಿಳಿಸಿವೆ.