Home Advertisement
Home ನಮ್ಮ ಜಿಲ್ಲೆ ಧಾರವಾಡ ಜನರ ಧ್ವನಿಗೆ ಜಯ : ಧಾರವಾಡದ ಆಕಾಶವಾಣಿ ಸ್ಥಳಾಂತರಕ್ಕೆ ಬ್ರೇಕ್

ಜನರ ಧ್ವನಿಗೆ ಜಯ : ಧಾರವಾಡದ ಆಕಾಶವಾಣಿ ಸ್ಥಳಾಂತರಕ್ಕೆ ಬ್ರೇಕ್

0
92

ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ: ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರ ರದ್ದು

ಧಾರವಾಡ: ಉತ್ತರ ಕರ್ನಾಟಕದ ಜನರ ಭಾವನೆಯನ್ನು ಪ್ರತಿಬಿಂಬಿಸುವ ಮಹತ್ವದ ಬೆಳವಣಿಗೆಯಲ್ಲಿ, ಧಾರವಾಡದಲ್ಲಿರುವ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಈ ಮೂಲಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ವಿಷಯದ ಬಗ್ಗೆ ಸ್ಥಳೀಯ ಜನರು ಹಾಗೂ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಧಾರವಾಡದ ಈ ಪ್ರಸಾರ ಕೇಂದ್ರವು ಉತ್ತರ ಕರ್ನಾಟಕದ ಸಂಸ್ಕೃತಿ, ಭಾಷೆ ಮತ್ತು ಸ್ಥಳೀಯ ವಿಷಯಗಳಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಥಳಾಂತರಕ್ಕೆ ವಿರೋಧ ಹೆಚ್ಚಾಗಿತ್ತು.

ಈ ಹಿನ್ನೆಲೆದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಪರ್ಕಿಸಿ, ಧಾರವಾಡ ಕೇಂದ್ರದ ಮಹತ್ವವನ್ನು ವಿವರಿಸಿದ್ದರು. ಧಾರವಾಡದಲ್ಲಿಯೇ ಕೇಂದ್ರವನ್ನು ಮುಂದುವರಿಸಲು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಸ್ಥಳಾಂತರ ನಿರ್ಧಾರವನ್ನು ಹಿಂಪಡೆದು, ಧಾರವಾಡದಲ್ಲಿಯೇ ಆಕಾಶವಾಣಿ ಕೇಂದ್ರವನ್ನು ಮುಂದುವರಿಸಲು ಆದೇಶಿಸಿದೆ. ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಕರ್ನಾಟಕದ ಜನತೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಧಾರವಾಡ ಆಕಾಶವಾಣಿ ಕೇಂದ್ರವು ಹಲವು ದಶಕಗಳಿಂದ ಉತ್ತರ ಕರ್ನಾಟಕದ ಸಂಸ್ಕೃತಿ, ಭಾಷೆ ಮತ್ತು ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡುವ ಪ್ರಮುಖ ಮಾಧ್ಯಮವಾಗಿದೆ. ಇದೀಗ ಇದರ ಮುಂದುವರಿಕೆ ಸ್ಥಳೀಯರಿಗೆ ದೊಡ್ಡ ನಿರಾಳತೆಯನ್ನು ತಂದಿದೆ.