Home Advertisement
Home ಸುದ್ದಿ ದೇಶ ಬಾಗಿಲು ತೆರೆದ ಕೇದಾರನಾಥ ಧಾಮ: ಭಕ್ತರಿಗೆ ಪ್ರಧಾನಿ ಮೋದಿ ಮತ್ತು ಸಿಎಂ ಧಾಮಿ ಶುಭ ಹಾರೈಕೆ

ಬಾಗಿಲು ತೆರೆದ ಕೇದಾರನಾಥ ಧಾಮ: ಭಕ್ತರಿಗೆ ಪ್ರಧಾನಿ ಮೋದಿ ಮತ್ತು ಸಿಎಂ ಧಾಮಿ ಶುಭ ಹಾರೈಕೆ

0
27

ಉತ್ತರಾಖಂಡದ ಪವಿತ್ರ ‘ದೇವಭೂಮಿ’ಯಲ್ಲಿ ಚಾರ್ ಧಾಮ್ ಯಾತ್ರೆಯ ಸಂಭ್ರಮ ಮನೆಮಾಡಿದೆ. ಕೇದಾರನಾಥ ಧಾಮದ ಬಾಗಿಲುಗಳು ಭಕ್ತರಿಗಾಗಿ ತೆರೆದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮತ್ತು ಯಾತ್ರಾರ್ಥಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿ ಅಭಿನಂದಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿಯವರು, “ಕೇದಾರನಾಥ ಧಾಮ ಮತ್ತು ಚಾರ್ ಧಾಮ್ ಯಾತ್ರೆಯು ಕೇವಲ ಧಾರ್ಮಿಕ ಪಯಣವಲ್ಲ, ಇದು ಭಾರತದ ಅಚಲ ನಂಬಿಕೆ, ರಾಷ್ಟ್ರೀಯ ಏಕತೆ ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ” ಎಂದು ಬಣ್ಣಿಸಿದ್ದಾರೆ. ಬಾಬಾ ಕೇದಾರ್ ಎಲ್ಲ ಭಕ್ತರಿಗೂ ಸುಖ-ಶಾಂತಿ ನೀಡಲಿ ಹಾಗೂ ಪ್ರತಿಯೊಬ್ಬರ ಯಾತ್ರೆಯು ಸುರಕ್ಷಿತ ಮತ್ತು ಆಧ್ಯಾತ್ಮಿಕವಾಗಿ ನೆಮ್ಮದಿದಾಯಕವಾಗಿರಲಿ ಎಂದು ಮೋದಿ ಟ್ವಿಟ್ ಖಾತೆಯಲ್ಲಿ ಫೋಸ್ಟ್ ಮಾಡುವ ಮೂಲಕ ಹಾರೈಸಿದ್ದಾರೆ.

ಹಾಗೇ.. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಿದ್ದಾರೆ. ಕೇದಾರನಾಥ ಮತ್ತು ಬದರಿನಾಥ ಧಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಭಕ್ತರ ಆಸನ ಸಾಮರ್ಥ್ಯದ ಹೆಚ್ಚಳ, ಸುಗಮ ಸಂಚಾರಕ್ಕೆ ಅನುಕೂಲವಾಗುವ ದಾರಿಗಳು, ಶುದ್ಧ ಕುಡಿಯುವ ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ನೆರವಿನ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ತುರ್ತು ಸಂದರ್ಭಗಳಿಗಾಗಿ ಭದ್ರತಾ ಪಡೆಗಳು ಮತ್ತು ಮಾಹಿತಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಬಾಗಿಲು ತೆರೆಯುವ ಸಂಭ್ರಮದ ಸಂದರ್ಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದು, ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. “ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸುವ ಜೊತೆಗೆ, ಯಾತ್ರೆಯನ್ನು ಸುಲಭ ಮತ್ತು ಆರಾಮದಾಯಕವಾಗಿಸುವುದು ನಮ್ಮ ಸರ್ಕಾರದ ಆದ್ಯ ಗುರಿಯಾಗಿದೆ” ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಒಟ್ಟಾರೆ.. ಈ ಬಾರಿಯ ಚಾರ್ ಧಾಮ್ ಯಾತ್ರೆಯು ಭಕ್ತರಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ. ಅಷ್ಟೇ ಅಲ್ಲದೇ ಯಾತ್ರಿಗಳಿಗೆ ಪ್ರಧಾನಿಗಳು ಶುಭಹಾರೈಸಿರುವುದು ಜನರಲ್ಲಿ ಸಂತಸವನ್ನುಂಟು ಮಾಡಿದೆ.