SK Home Ad
Home ಸಿನಿ ಮಿಲ್ಸ್ ನಟಿ ಕತ್ರಿನಾಗೆ ಸಲ್ಮಾನ್ ಸಾಥ್‌: ಟ್ರೋಲ್‌ಗಳಿಗೆ ಮತ್ತು ಪಾಪರಾಜಿಗಳಿಗೆ ಸಲ್ಲು ‘ಖಡಕ್’ ವಾರ್ನಿಂಗ್!

ನಟಿ ಕತ್ರಿನಾಗೆ ಸಲ್ಮಾನ್ ಸಾಥ್‌: ಟ್ರೋಲ್‌ಗಳಿಗೆ ಮತ್ತು ಪಾಪರಾಜಿಗಳಿಗೆ ಸಲ್ಲು ‘ಖಡಕ್’ ವಾರ್ನಿಂಗ್!

0
16

ತಾರೆಯರ ವಯಸ್ಸು, ತೂಕ, ನೋಟ, ಕೌಟುಂಬಿಕ ಹಿನ್ನೆಲೆ ಹಾಗೂ ತಾಯ್ತನವನ್ನು ಗುರಿಯಾಗಿಸಿಕೊಂಡು ಜಾಲತಾಣಗಳಲ್ಲಿ ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಮಹಿಳಾ ನಟಿಯರ ಅನುಮತಿಯಿಲ್ಲದೆ ಆಕ್ಷೇಪಾರ್ಹ ಕೋನಗಳಲ್ಲಿ ಛಾಯಾಚಿತ್ರ ತೆಗೆಯುವ ಪಾಪರಾಜಿಗಳಿಗೂ ಬಿಗ್ ಬಾಸ್ ವೇದಿಕೆಯಲ್ಲಿ ನೇರ ಎಚ್ಚರಿಕೆ ನೀಡಿದ್ದಾರೆ.

‘ಬಿಗ್ ಬಾಸ್’ ಕಾರ್ಯಕ್ರಮದ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸ್ಪರ್ಧಿಗಳೊಂದಿಗೆ ಟ್ರೋಲಿಂಗ್ ಸಂಸ್ಕೃತಿಯ ಕುರಿತು ಚರ್ಚಿಸುವಾಗ ಸಲ್ಮಾನ್ ಖಾನ್ ತೀವ್ರ ಕೋಪಗೊಂಡರು. ಮಾತುಕತೆಯ ವೇಳೆ ಮ್ಮ ಕೋಟ್ ತೆಗೆದು ಕ್ಯಾಪ್ ಕೆಳಗೆ ಎಸೆದು ಟ್ರೋಲರ್ಸ್‌ ವಿರುದ್ಧ ಗರಂ ಆಗಿದ್ದಾರೆ. ಟ್ರೋಲರ್‌ಗಳ ಮನಸ್ಥಿತಿಯನ್ನು ಕಠಿಣ ಶಬ್ದಗಳಲ್ಲಿ ತಖ್ತೆಗೆ ತೆಗೆದುಕೊಂಡರು. “ಜನರು ಇದ್ದಕ್ಕಿದ್ದಂತೆ ಇತರರ ವಯಸ್ಸು, ತೂಕ ಹಾಗೂ ವೃತ್ತಿಜೀವನದ ಹಿನ್ನಡೆಯ ಬಗ್ಗೆ ವ್ಯಂಗ್ಯವಾಡಲು ಪ್ರಾರಂಭಿಸುತ್ತಾರೆ. ತಾಯಿಯಾಗುವ ಹಂತದಲ್ಲಿರುವ ಮಹಿಳೆಯರನ್ನು ಏಕೆ ಟ್ರೋಲ್ ಮಾಡುತ್ತೀರಿ? ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ನೈಸರ್ಗಿಕ,” ಎಂದು ಪ್ರತಿಯೊಬ್ಬರನ್ನೂ ತಾರಟೆಗೆ ತೆಗೆದುಕೊಂಡರು.

ಸಲ್ಮಾನ್ ಖಾನ್ ತಮ್ಮ ಭಾಷಣದಲ್ಲಿ ಯಾವುದೇ ನಟಿಯ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲವಾದರೂ, ಇತ್ತೀಚೆಗೆ ತಾಯ್ತನದ ಹಂತದಲ್ಲಿದ್ದು ತೂಕ ಹೆಚ್ಚಿಸಿಕೊಂಡಿದ್ದಕ್ಕಾಗಿ ಟ್ರೋಲಿಂಗ್‌ಗೆ ಒಳಗಾಗಿದ್ದ ನಟಿ ಕತ್ರಿನಾ ಕೈಫ್ ಅವರ ಬೆಂಬಲಕ್ಕಾಗಿಯೇ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.

ಅಲ್ಲದೆ… ಸೆಲೆಬ್ರಿಟಿಗಳ ಅನುಮತಿಯಿಲ್ಲದೆ ಹಿಂಬದಿಯಿಂದ ಛಾಯಾಚಿತ್ರ ಹಾಗೂ ವಿಡಿಯೋ ಚಿತ್ರೀಕರಿಸುವ ಪಾಪರಾಜಿಗಳ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ, ಇಂತಹ ಸಾರ್ವಜನಿಕ ಅತಿಕ್ರಮಣವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಸಲ್ಮಾನ್ ಖಾನ್ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಿಲುವಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.