ಬೆಳಗಾವಿ: ರವಿವಾರ ತಡರಾತ್ರಿ ನಗರದ ಚವಾಟಗಲ್ಲಿಯಲ್ಲಿ ಮನೆಯಲ್ಲಿ ಇದ್ದ ಫ್ರಿಜ್ ಸ್ಪೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಮನೆಯಲ್ಲಿರುವವರು ಬೆಂಕಿಯಿಂದ ಹೊರ ಬರಲಾರದೆ ನಾಲ್ವರು ಸಜೀವ ದಹನಗೊಂಡ ಘಟನೆ ನಡೆದಿದೆ.
ಗಜಾನನ ದಾಮೋನೆ(65) ರೋಶನ್ ( 21), ಶಾರದಾ (45) ಭಾರತಿ(50)ಮೃತರು. ಈ ಕುಟುಂಬ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಇಬ್ಬರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪೊಲೀಸರು ಧಾವಿಸಿ ಮುಂದಿನಕ್ರಮ ಕೈಗೊಂಡರು. ವಿಷಯ ತಿಳಿದು ಶಾಸಕ ಆಸೀಪ್ ಸೇಠ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ನೆರವು ಸಾಂತ್ವನ ನೀಡಿದರು. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.





















