Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಕಾಕ್ರೋಚ್ ಜನತಾ ಪಾರ್ಟಿಯಿಂದ ಬಿಜೆಪಿ ವಿಚಲಿತ

ಕಾಕ್ರೋಚ್ ಜನತಾ ಪಾರ್ಟಿಯಿಂದ ಬಿಜೆಪಿ ವಿಚಲಿತ

0
11

ಬಾಗಲಕೋಟೆ: ಕಾಕ್ರೋಚ್ ಜನತಾ ಪಾರ್ಟಿಯಿಂದ ಬಿಜೆಪಿ ಅವರು ವಿಚಲಿತರಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಾಕ್ರೋಚ್ ಜನತಾ ಪಾರ್ಟಿ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ನಿರ್ಲಕ್ಷ್ಯ ಮಿತಿಮೀರಿದರೆ ಇಂಥದೆಲ್ಲ ಅನಿವಾರ್ಯ. ಇತಿಹಾಸದಲ್ಲಿ ಜನ ಎಲ್ಲ ಪಕ್ಷಗಳನ್ನೂ ಸೋಲಿಸಿದ್ದಾರೆ. ಇಂದಿರಾ ಗಾಂಧಿ, ಮೂರಾರ್ಜಿ ದೇಸಾಯಿ, ವಾಜಪೇಯಿ ಸರ್ಕಾರಗಳು ಇದ್ದಾಗಲೂ ಸೋಲಿಸಿದ್ದಾರೆ. ಆಳುವವರು ತಿಳಿದುಕೊಳ್ಳಬೇಕು ಎಂದರು.

ಕಾಕ್ರೋಚ್ ಪಕ್ಷಕ್ಕೆ ಶೇ. 40 ಪಾಕಿಸ್ತಾನದ ಫಾಲೋವರ್ಸ್ ಇದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಈ ರೀತಿ ಹೇಳಿಬಿಟ್ಟಿರೆ ವಿಷಯಾಂತರವಾಗುತ್ತದೆ ಎಂಬುದನ್ನು ಅರಿತು ಹೇಳುತ್ತಾರೆ. ಸಿಜೆಪಿ ಅವರ ಖಾತೆಗಳನ್ನೂ ತಡೆಯುತ್ತಿದ್ದಾರೆ. ಬಿಜೆಪಿ ಅವರು ಇದರಿಂದ ವಿಚಲಿತರಾಗಿದ್ದಾರೆ ಎಂಬುದಂತೂ ಸತ್ಯ ಎಂದರು.

ಸಿಎಂ ಸಿದ್ದರಾಮಯ್ಯ ಕಾಕ್ರೋಚ್ ಜನತಾ ಪಾರ್ಟಿ ಟಿ ಶರ್ಟ್ ಪ್ರದರ್ಶನ ಮಾಡಿರುವ ವಿಷಯಕ್ಕೆ ಉತ್ತರಿಸಿದ ಅವರು ಎಲ್ಲರೂ ಬಿಜೆಪಿ ದುರಾಡಳಿತದ ವಿರುದ್ಧ ಒಂದು ವೇದಿಕೆಯಲ್ಲಿ ಬರಬೇಕಿದೆ ಎಂದರು.