ಬಾಗಲಕೋಟೆ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನ ಹೊಡೆಯುತ್ತಾರೆ ಎಂದು ಹೇಳಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಪ್ರಬುದ್ಧ ಎಂದು ಭಾವಿಸಿದ್ದೆ ಆದರೆ ಪ್ರಧಾನಿ ವಿರುದ್ಧ ಇಂಥ ಹೇಳಿಕೆ ನೀಡಿರುವ ಅವರನ್ನೇ ಜನ ಹೊಡೆಯತ್ತಾರೆ. ಜನರಷ್ಟೇ ಅಲ್ಲ ಅವರ ಪಕ್ಷದ ಕಾರ್ಯಕರ್ತರೇ ಹೊಡೆಯುತ್ತಾರೆ ಎಂದಿದ್ದಾರೆ. ಅವರ ಮಗ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಹುಚ್ಚ ಎಂದು ಜರಿದಿದ್ದಾರೆ.
ಅಲ್ಲದೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹೆಣ್ಣೂ ಅಲ್ಲ ಗಂಡೂ ಅಲ್ಲ. ಅಂಥ ಪಪ್ಪುನನ್ನು ಜನರ ಉಡಿಗೆ ಹಾಕುವುದಾಗಿ ಅವರ ತಾಯಿ ಹೇಳುತ್ತಾರೆ. ಇಂಥ ಹುಚ್ಚನನ್ನು ಯಾರು ಉಡಿಗೆ ತೆಗೆದುಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಮುಂದವರಿದು ಮಾತನಾಡಿದ ಅವರು ವಂದೇ ಮಾತರಂ ಹಾಡುವುದಿಲ್ಲ ಎನ್ನುವ ಕಾಂಗ್ರೆಸಿನ ನಿಲುವು ಸಂವಿಧಾನ, ಅಂಬೇಡ್ಕರ್ ಅವರ ವಿರೋಧಿ ನಡೆಯಾಗಿದೆ ಎಂದು ಕುಟುಕಿದ್ದಾರೆ.






















