SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಡಿ.ಕೆ. ಶಿವಕುಮಾರ ರಿಯಲ್ ಎಸ್ಟೇಟ್ ಸಿಎಂ

ಡಿ.ಕೆ. ಶಿವಕುಮಾರ ರಿಯಲ್ ಎಸ್ಟೇಟ್ ಸಿಎಂ

0
38

ಬಾಗಲಕೊಟೆ: ಮಳೆ, ಬೆಳೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಿಯಲ್ ಎಸ್ಟೇಟ್ ದಂಧೆಯಲ್ಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಬಾಗಲಕೊಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಗಳು ಕ್ಷೇತ್ರಗಳಿಗೆ ತೆರಳಿ ಬರ ವೀಕ್ಷಿಸಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಹಣವಿಲ್ಲ ಎಂದು ಶಾಸಕರು ಕ್ಷೇತ್ರಕ್ಕೆ ತೆರಳುತ್ತಿಲ್ಲ, ಕ್ಷೇತ್ರಕ್ಕೆ ಹೋದರೆ ಜನ ಕಲ್ಲಿನಿಂದ ಹೊಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮುಖ್ಯಮಂತ್ರಿ ಬೆಂಗಳೂರು ಬಿಟ್ಟು ಬೇರೆಡೆ ಹೋಗುತ್ತಿಲ್ಲ, ಉತ್ತರ ಕರ್ನಾಟಕ್ಕೆ ಬಂದಿಲ್ಲ. ಇಲ್ಲಿನ ಜನರ ಸಮಸ್ಯೆ ಕೇಳಿಲ್ಲ, ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಟೌನ್‌ಶಿಪ್ ಮಾಡುವದಾದರೆ ನಮ್ಮ ಭಾಗದಲ್ಲಿ ಮಾಡಲಿ ಎಂದರು.