Home Advertisement
Home ನಮ್ಮ ಜಿಲ್ಲೆ ಬನಹಟ್ಟಿಯಲ್ಲಿ ಅಪರೂಪದ ನಾಲ್ಕು ಕರುಗಳ ಜನನ

ಬನಹಟ್ಟಿಯಲ್ಲಿ ಅಪರೂಪದ ನಾಲ್ಕು ಕರುಗಳ ಜನನ

0
150
ಕರು

ಬಾಗಲಕೋಟೆ: ಜಿಲ್ಲೆಯ ಬನಹಟ್ಟಿ ಸಮೀಪದ ಆಸಂಗಿ ಗ್ರಾಮದಲ್ಲಿ ರವೀಂದ್ರ ಶಿರಹಟ್ಟಿ ಎಂಬುವರಿಗೆ ಸೇರಿದ ಜವಾರಿ ಆಕಳೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ.
ಕರುಗಳ ಪೈಕಿ ಮೂರು ಗಂಡು ಹಾಗು ಒಂದು ಹೆಣ್ಣು ಕರು ಇರುವದು ಅಪರೂಪದ ವಿದ್ಯಾಮನವಾಗಿದೆ. ಕಳೆದ ಸೋಮವಾರ ಸಂಜೆ ಹೊತ್ತು ಏಕಕಾಲಕ್ಕೆ ನಾಲ್ಕೂ ಕರುಗಳ ಜನನವಾಗಿದ್ದು ವಿಶೇಷವಾಗಿದೆ. ಈ ವಿಶೇಷ ಘಟನೆಯನ್ನು ವೀಕ್ಷಿಸಲು ಸುತ್ತಲಿನ ಗ್ರಾಮಗಳಿಂದ ಜನತೆ ವೀಕ್ಷಣೆಗೆ ಬರುತ್ತಿರುವದು ಸಾಮಾನ್ಯವಾಗಿದೆ.