SK Home Ad
Home ನಮ್ಮ ಜಿಲ್ಲೆ ವಿಜಯಪುರ ವಿಜಯಪುರದಲ್ಲಿ ಗುಂಡಿನ ಸದ್ದು! ಹಾಡಹಗಲೇ ಯುವಕನ ಬರ್ಬರ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು! ಹಾಡಹಗಲೇ ಯುವಕನ ಬರ್ಬರ ಹತ್ಯೆ

0
59

ವಿಜಯಪುರ: ಸ್ಕೂಟಿಯ ಮೇಲೆ ತೆರಳುತ್ತಿದ್ದ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ನಗರದ ಮುಂಡೇವಾಡಿ ಆಸ್ಪತ್ರೆ ಬಳಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಯಾಸೀನ್ ಜುಬೇರಿ ಎಂದು ಗುರುತಿಸಲಾಗಿದೆ.

ಯಾಸೀನ್ ಮೇಲೆ ದುಷ್ಕರ್ಮಿಗಳು ಏಕಾಏಕಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ, ಎರಡು ಗುಂಡುಗಳು ಎದೆಗೆ ತಾಕಿವೆ. ಇದರಿಂದ ಯಾಸೀನ್ ಅಸುನೀಗಿದ್ದಾನೆ.

ಗ್ಯಾಂಗ್ ಬಾವಡಿಯ ನಿವಾಸಿಯಾಗಿರುವ ಯಾಸೀನ್ ಹಾಗೂ ಇನ್ನಿತರರ ನಡುವೆ ಕಳೆದ ಕೆಲ ದಿನಗಳ ಹಿಂದೆ ಡಿಜೆ ವಿಚಾರವಾಗಿ ಗಲಾಟೆ ನಡೆದಿತ್ತು. ಇದೇ ವೈಷಮ್ಯ ಸಾಧಿಸಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆಯ ವೇಳೆ ಸತ್ಯ ಹೊರ ಬರಬೇಕಿದೆ. ನಾಲ್ಕು ಸುತ್ತು ಫೈರಿಂಗ್ ನಡೆದಿದ್ದು, ಎರಡು ಗುಂಡುಗಳು ಆತನಿಗೆ ತಾಕಿಲ್ಲ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.