SK Home Ad
Home ಕ್ರೀಡೆ IPL 2026: ಪಂಜಾಬ್‌ಗೆ 197 ರನ್‌ ಗುರಿ ನೀಡಿದ ಲಖನೌ

IPL 2026: ಪಂಜಾಬ್‌ಗೆ 197 ರನ್‌ ಗುರಿ ನೀಡಿದ ಲಖನೌ

0
140

ಲಖನೌ: ಆರಂಭಿಕ ಆಘಾತದ ನಡುವೆಯೂ ಜೋಶ್ ಇಂಗ್ಲಿಸ್ ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡ ಪಂಜಾಬ್‌ ಕಿಂಗ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಲಖನೌ ತಂಡಕ್ಕೆ ಅರ್ಶಿನ್ ಕುಲಕರ್ಣಿ (0) ಮತ್ತು ನಿಕೋಲಸ್ ಪೂರನ್ (2) ವಿಕೆಟ್‌ ಉರುಳಿಸುವ ಮೂಲಕ ಆರಂಭದಲ್ಲಿಯೇ ಪಂಜಾಬ್‌ ಆಘಾತವನ್ನು ನೀಡಿತು.

ಮೂರನೇ ವಿಕೆಟ್‌ಗೆ ಕ್ರಿಸ್‌ಗೆ ಬರುತ್ತಿದ್ದಂತೆ ಪಂಜಾಬ್‌ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದ ಆಯುಷ್ ಬದೋನಿ ಕೇವಲ 18 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ನಿಂದ 43 ರನ್‌ಗಳಿಸಿ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದರು.

ಜೋಶ್ ಇಂಗ್ಲಿಸ್ ಜತೆಯಾದ ನಾಯಕ ರಿಷಭ್‌ ಪಂತ 43 ಎಸೆತದಲ್ಲಿ 65 ರನ್‌ಗಳ ಜತೆಯಾಟ ನಡೆಸಿದರು. ಈ ವೇಳೆ ಪಂತ್‌ ವೈಯಕ್ತಿಕ 26 ರನ್‌ಗಳ ಕಾಣಿಕೆ ನೀಡಿ ಪೆವಿಲಿಯನ್‌ ಸೇರಿದರು.

ಉತ್ತಮ ಬ್ಯಾಟಿಂಗ್‌ ಆಡುತ್ತಿದ್ದ ಜೋಶ್ ಇಂಗ್ಲಿಸ್ 44 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್‌ನಿಂದ 72 ರನ್‌ ಗಳಿಸಿ, 17ನೇ ಓವರ್‌ನ ಕೊನೆಯ ಎಸೆತದಲ್ಲಿ ಶಶಾಂಕ್ ಸಿಂಗ್ ಎಸೆತದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ಕೊಟ್ಟು ಔಟಾದರು.

ಅಬ್ದುಲ್ ಸಮದ್ ಅಜೇಯ 37 ಮತ್ತು ಅರ್ಜುನ ತೆಂಡೂಲ್ಕರ್‌ 5 ರನ್‌ ಗಳಿಸಿ ಅಜೇಯರಾಗಿ ಉಳಿದರು. ಪಂಜಾಬ್‌ ಕಿಂಗ್ಸ್‌ ಪರ ಯುಜುವೇಂದ್ರ ಚಾಹಲ್ 25ಕ್ಕೆ 2, ಮಾರ್ಕೊ ಜಾನ್ಸೆನ್ 29ಕ್ಕೆ 2 ಮತ್ತು ಅಜ್ಮತುಲ್ಲಾ ಒಮರ್ಜೈ, ಶಶಾಂಕ್ ಸಿಂಗ್ ತಲಾ ಒಂದು ವಿಕೆಟ್‌ ಪಡೆದರು.