Home Advertisement
Home ಸಿನಿ ಮಿಲ್ಸ್ ನಟಿ ರುಕ್ಮಿಣಿ ವಸಂತ್ ‘ಬಿಕಿನಿ ಫೋಟೋ’ ವೈರಲ್: ಅಸಲಿ ಸತ್ಯ ಬಿಚ್ಚಿಟ್ಟ ‘ಸಪ್ತ ಸಾಗರದಾಚೆ ಎಲ್ಲೋ’...

ನಟಿ ರುಕ್ಮಿಣಿ ವಸಂತ್ ‘ಬಿಕಿನಿ ಫೋಟೋ’ ವೈರಲ್: ಅಸಲಿ ಸತ್ಯ ಬಿಚ್ಚಿಟ್ಟ ‘ಸಪ್ತ ಸಾಗರದಾಚೆ ಎಲ್ಲೋ’ ಸುಂದರಿ!

0
29

ಕಾಂತಾರ ನಟಿ, ಸ್ಯಾಂಡಲ್‌ವುಡ್ ಸ್ಟಾರ್ ರುಕ್ಮಿಣಿ ವಸಂತ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿದ್ದರು. ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ ಎನ್ನಲಾದ ಕೆಲವು ಫೋಟೋಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ ಈ ಫೋಟೋಗಳ ಹಿಂದಿನ ಅಸಲಿ ಸತ್ಯವೇ ಬೇರೆ ಇದೆ. ಸ್ವತಃ ನಟಿ ರುಕ್ಮಿಣಿ ವಸಂತ್ ಈ ಕುರಿತು ಅಧಿಕೃತವಾಗಿ ಸ್ಪಷ್ಟನೆ ನೀಡುವ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ವೈರಲ್ ಆಗುತ್ತಿರುವ ಫೋಟೋಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ನಟಿ, ಇವೆಲ್ಲವೂ ಸಂಪೂರ್ಣವಾಗಿ ನಕಲಿ ಫೋಟೋಗಳು ಎಂದು ತಮ್ಮ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನವಾದ AI (ಕೃತಕ ಬುದ್ಧಿಮತ್ತೆ) ಬಳಸಿ ಯಾರೋ ಕಿಡಿಗೇಡಿಗಳು ತಮ್ಮ ಮುಖವನ್ನು ಬೇರೆ ದೇಹಕ್ಕೆ ಜೋಡಿಸಿ ಈ ರೀತಿಯ ಕೃತ್ಯ ಎಸಗಿದ್ದಾರೆ. ಇದನ್ನು ತಮ್ಮ ಮೊದಲ ಬಿಕಿನಿ ಫೋಟೋಶೂಟ್ ಎಂದು ಬಿಂಬಿಸಿ ಹರಿಬಿಟ್ಟಿರುವುದು ಅತ್ಯಂತ ಖಂಡನೀಯ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ನಟಿ: ತಮ್ಮ ಹೆಸರಿಗೆ ಮಸಿ ಬಳಿಯಲು ಯತ್ನಿಸಿರುವ ಈ ಘಟನೆಯನ್ನು ರುಕ್ಮಿಣಿ ವಸಂತ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕೇವಲ ಸ್ಪಷ್ಟನೆ ನೀಡುವುದಕ್ಕೆ ಸೀಮಿತವಾಗದೆ, ಈ ನಕಲಿ ಫೋಟೋಗಳನ್ನು ಸೃಷ್ಟಿಸಿದವರು ಮತ್ತು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗುತ್ತಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ.. ತಂತ್ರಜ್ಞಾನದ ದುರ್ಬಳಕೆಯಿಂದ ಸೆಲೆಬ್ರಿಟಿಗಳು ಎದುರಿಸುತ್ತಿರುವ ಡಿಜಿಟಲ್ ಅಪಾಯಕ್ಕೆ ಇದೊಂದು ಮತ್ತೊಂದು ಉದಾಹರಣೆಯಾಗಿದೆ. ನಕಲಿ ಫೋಟೋಗಳನ್ನು ನಂಬಿ ಯಾರೂ ಕೂಡ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಈ ಮೂಲಕ ವಿನಂತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಟಿಯರ ಮಾರ್ಫ್ ಮಾಡಿದ ಫೋಟೋಗಳು ವೈರಲ್ ಆಗುತ್ತಿರುವುದು ಸೈಬರ್ ಜಗತ್ತಿನಲ್ಲಿ ದೊಡ್ಡ ಆತಂಕ ಮೂಡಿಸಿದೆ.