Home Advertisement
Home ಕ್ರೀಡೆ IPL 2026: ಉಳಿವಿಗಾಗಿ ಮುಂಬೈ ಜತೆಗೆ ಕೆಕೆಆರ್ ಹೋರಾಟ

IPL 2026: ಉಳಿವಿಗಾಗಿ ಮುಂಬೈ ಜತೆಗೆ ಕೆಕೆಆರ್ ಹೋರಾಟ

0
33

ಕೋಲ್ಕತ್ತಾ: ಐಪಿಎಲ್ 2026ರ 65ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಡನ್ ಗಾರ್ಡನ್‌ನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಆಫ್ ರೇಸ್‌ನಲ್ಲಿ ಅನಿಶ್ಚಿತತೆ ಎದುರಿಸುತ್ತಿರುವ ಕೆಕೆಆರ್‌ಗೆ ಮುಂದಿನ ಹಂತಕ್ಕೇರಲು ಇಂದಿನ ಗೆಲುವು ಅತ್ಯಂತ ನಿರ್ಣಾಯಕವಾಗಿದೆ.

ಮತ್ತೊಂದೆಡೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈಗಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಮರ್ಯಾದೆ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಆದರೆ ಮುಂಬೈ ತಂಡಕ್ಕೆ ಗಾಯದ ಸಮಸ್ಯೆಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಸ್ಟಾರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ (ಮಣಿಕಟ್ಟಿನ ಗಾಯ) ಮತ್ತು ಆಲ್‌ರೌಂಡರ್ ರಾಜ್ ಬಾವಾ (ಹೆಬ್ಬೆರಳಿನ ಗಾಯ) ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಭಾರಿ ಹಿನ್ನಡೆ ತಂದಿದೆ. ಬೆನ್ನುನೋವಿನ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಅವರ ಲಭ್ಯತೆಯೂ ಇನ್ನೂ ಅನುಮಾನವಾಗಿಯೇ ಉಳಿದಿದೆ.

ಈ ಪಂದ್ಯದಲ್ಲಿ ಕೆಕೆಆರ್ ಪರ ಭರ್ಜರಿ ಫಾರ್ಮ್‌ನಲ್ಲಿರುವ ಕಿವೀಸ್ ಬ್ಯಾಟರ್ ಫಿನ್ ಅಲೆನ್ ಮತ್ತು ಮುಂಬೈನ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ನಡುವಿನ ಕಾದಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ತನ್ನ ಮರ್ಯಾದೆ ಉಳಿಸಿಕೊಳ್ಳುತ್ತಾ ಅಥವಾ ಕೆಕೆಆರ್ ಪ್ಲೇಆಫ್ ಹಾದಿ ಸುಗಮಗೊಳಿಸಿಕೊಳ್ಳುತ್ತಾ ಎಂಬುದು ಇಂದಿನ ಕುತೂಹಲ.