ಬೆಳಗಾವಿ: ಶಿವಂ ಅಸೋಸಿಯೇಟ್ ಸಂಸ್ಥೆಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಪರಿಶೀಲನೆ ಬೆನ್ನಲ್ಲೇ, ಸಂಸ್ಥೆಯ ಮಾಲೀಕರೆಂದು ಹೇಳಲಾಗುತ್ತಿರುವ ಶಿವಾನಂದ ಎಸ್. ನೀಲಣ್ಣವರ ಅವರನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಂದಾಯ, ಸಹಕಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಶಿವಬಸವ ನಗರದಲ್ಲಿರುವ ಶಿವಂ ಅಸೋಸಿಯೇಟ್‌ನ ಎರಡು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಣೆ, ಹೆಚ್ಚಿನ ಬಡ್ಡಿ ಭರವಸೆ, ಹೂಡಿಕೆ ದಾಖಲೆಗಳು ಹಾಗೂ ಸಂಸ್ಥೆಯ ಕಾನೂನುಬದ್ಧತೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು.























