Home Advertisement
Home ಸುದ್ದಿ ದೇಶ ಮೋದಿ ಚಿನ್ನ ಖರೀದಿಸಬೇಡಿ ಎಂದ ಬೆನ್ನಲ್ಲೇ ಇಳಿಕೆ ಕಂಡ ಬಂಗಾರ

ಮೋದಿ ಚಿನ್ನ ಖರೀದಿಸಬೇಡಿ ಎಂದ ಬೆನ್ನಲ್ಲೇ ಇಳಿಕೆ ಕಂಡ ಬಂಗಾರ

0
151

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಂದು ವರ್ಷಗಳ ಕಾಲ ಯಾವುದೇ ಸಮಾರಂಭವಿದ್ದರೂ ಚಿನ್ನವನ್ನು ಖರೀದಿಸಬೇಡಿ ಎಂದು ದೇಶದ ನಾಗರಿಕರಲ್ಲಿ ಮನವಿ ಮಾಡಿದ ಬೆನ್ನಲ್ಲೇ ಹಳದಿ ಲೋಹದ ಬೆಲೆಯಲ್ಲಿ ಸೋಮವಾರ ಅಲ್ಪ ಇಳಿಕೆ ಕಂಡು ಬಂದಿದೆ.

ಮಧ್ಯಪ್ರಾಚ್ಯದಲ್ಲಿ ನಡೆದಿರುವ ಸಂಘರ್ಷವನ್ನು ಕೊನೆಗೊಳಿಸುವ ಇರಾನ್‌ನ ಶಾಂತಿ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿರುವುದು ಒಂದಡೆಯಾದರೆ, ಇತ್ತ ಪ್ರಧಾನಿ ಮೋದಿ ಭಾರತೀಯರಿಗೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು ಹೇಳಿರುವುದು ಕೂಡ ಪರಿಣಾಮ ಬೀರಿದೆ ಎನ್ನಲಾಗಿದೆ.

ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ವಿದೇಶಿ ವಿನಿಮಯವನ್ನು ಉಳಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಭಾರತದ ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಮತ್ತು ಚಿನ್ನದ ಆಮದು ಬಿಲ್ ಕಡಿಮೆ ಮಾಡಲು, ವರ್ಷದವರೆಗೆ ಚಿನ್ನ ಖರೀದಿ ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 1,52,350 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,39,650 ರೂ. ಆಗಿದೆ. ದೆಹಲಿಯಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 1,52,500 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,39,800 ರೂ. ಆಗಿದೆ.

ಮುಂಬೈ 24 ಕ್ಯಾರೆಟ್‌ ಚಿನ್ನದ ಬೆಲೆ 1,52,350 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,39,650 ರೂ. ಆಗಿದೆ. ಚೆನ್ನೈ 24 ಕ್ಯಾರೆಟ್‌ ಚಿನ್ನದ ಬೆಲೆ 1,54,370 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,41,500 ರೂ. ಆಗಿದೆ.

ಹೈದರಾಬಾದ್ 24 ಕ್ಯಾರೆಟ್‌ ಚಿನ್ನದ ಬೆಲೆ 1,52,350 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,39,650 ರೂ. ಆಗಿದೆ. ಅಹಮದಾಬಾದ್ 24 ಕ್ಯಾರೆಟ್‌ ಚಿನ್ನದ ಬೆಲೆ 1,52,400 ರೂ. ಆಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 1,39,700 ರೂ. ಆಗಿದೆ.

ಇನ್ನೊಂದಡೆ ಷೇರು ಮಾರುಕಟ್ಟೆ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಮಾರುಕಟ್ಟೆಯ ಕುಸಿತಕ್ಕೂ ಮೋದಿ ಅವರ ಮಾತು ಕಾರಣ ಎಂದು ಹೇಳಲಾಗುತ್ತಿದೆ. ಪ್ರಮುಖ ಸೂಚ್ಯಂಕಗಳು ಸೋಮವಾರ ರೆಡ್ ನಲ್ಲಿ ಆರಂಭವಾಗಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಆರಂಭಿಕ ವಹಿವಾಟನಲ್ಲೇ ಭಾರಿ ಅಂಶಗಳನ್ನು ಕಳೆದುಕೊಂಡಿದೆ.