ಮುಂಬೈ: ಮುಂಬಯಿನ ಫಿನಿಕ್ಸ್ ಪಲ್ಲಾಡಿಯಂನಲ್ಲಿ ನಡೆದ ಫೆಂಟಿ ಬ್ಯೂಟಿ ಅನಾವರಣ ಕಾರ್ಯಕ್ರಮದಲ್ಲಿ ಗ್ಲೋಬಲ್ ಬ್ಯೂಟಿ ಐಕಾನ್ ರಿಹಾನ್ನಾ ಮತ್ತು ರಿಲಯನ್ಸ್ ರಿಟೇಲ್ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಈ ಪ್ರತಿಷ್ಠಿತ ಬ್ರ್ಯಾಂಡ್ ಪ್ರವೇಶವನ್ನು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ.
ಭಾರತದ ಅತಿ ದೊಡ್ಡ ರಿಟೇಲರ್ ಆಗಿರುವ ರಿಲಯನ್ಸ್ ರಿಟೇಲ್ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ರಿಹಾನ್ನಾರ ಬ್ಯೂಟಿ ಬ್ರ್ಯಾಂಡ್ ಫೆಂಟಿ ಬ್ಯೂಟಿ 2024ರಲ್ಲಿಯೇ ಭಾರತದ ಸೌಂದರ್ಯ ಕ್ಷೇತ್ರದಲ್ಲಿ ತಮ್ಮ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕುರಿತ ಹೂಡಿಕೆಯಲ್ಲಿ ಪಾಲುದಾರಿಕೆಯನ್ನು ಘೋಷಿಸಿತ್ತು. ಈಗ ಫೆಂಟಿ ಬ್ಯೂಟಿ ಇಲ್ಲಿ ಅನಾವರಣಗೊಂಡಿದ್ದು, ಇದರ ಸೌಂದರ್ಯ ವರ್ಧನೆಯ ಉತ್ಪನ್ನಗಳು ರಿಲಯನ್ಸ್ ರಿಟೇಲ್‌ನ ಸೌಂದರ್ಯ ವೇದಿಕೆಗಳಾದ ಟಿರಾ ಮತ್ತು ಸೆಫೋರ ಇಂಡಿಯಾದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಿವೆ.
ಫೆಂಟಿ ಬ್ಯೂಟಿ ಬಿಡುಗಡೆ ಸಮಾರಂಭದಲ್ಲಿ ತಾರಾಬಳಗವೇ ನೆರೆದಿತ್ತು. ಜಾಹ್ನವಿ ಕಪೂರ್, ಕನಿಕಾ ಕಪೂರ್, ಅದಿತಿ ಭಾಟಿಯಾ, ಪಶ್ಮಿನಾ ರೋಷನ್ ಮತ್ತು ಮನೀಶ್ ಮಲ್ಹೋತ್ರಾ ಸೇರಿದಂತೆ ಫ್ಯಾಷನ್ ಮತ್ತು ಮನರಂಜನಾ ಕ್ಷೇತ್ರದ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಫಿನಿಕ್ಸ್ ಪಲ್ಲಾಡಿಯಂನಲ್ಲಿ ಫೆಂಟಿ ಬ್ಯೂಟಿ ಪಾಪ್‌ಅಪ್ 2026ರ ಏಪ್ರಿಲ್ 25ರಿಂದ ಮೇ 8ರವರೆಗೆ ಗ್ರಾಹಕರಿಗೆ ತೆರೆದಿರುತ್ತದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ಗ್ರಾಹಕರು ಫೆಂಟಿ ಬ್ಯೂಟಿಯ ಜಗತ್ತಿನಲ್ಲಿ ಸುಂದರ ಪಯಣದ ಅನುಭವ ಪಡೆಯಬಹುದು.























