ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭರವಸೆಯ ಆಟಗಾರ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನು ಮೊತ್ತೊಂದು ದಾಖಲೆಯ ಪಟ್ಟಿಗೆ ಸೇರಿಸಿದರು.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಸಂಜು ಈ ಸಾಧನೆ ಮಾಡಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ 5000 ರನ್ ಗಳಿಸಿದ 10ನೇ ಆಟಗಾರನಾಗಿ ಮತ್ತು 8ನೇ ಭಾರತೀಯ ಆಟಗಾರನಾಗಿ ಸಂಜು ಸ್ಯಾಮ್ಸನ್ ಈ ಸಾಧನೆ ಮಾಡಿದರು.
ಸದ್ಯ ಸ್ಯಾಮ್ಸನ್ 185 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5 ಶತಕ, 31 ಅರ್ಧಶತಕ ಸೇರಿದಂತೆ 5008 ರನ್‌ಗಳನ್ನು ಗಳಿಸಿದ್ದಾರೆ. ಪ್ರಸಕ್ತ ಪಂದ್ಯಾವಳಿಯಲ್ಲಿ ಚೆನ್ನೈ ಪರ ಆಡುತ್ತಿರುವ ಸ್ಯಾಮ್ಸನ್ 8 ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದು, ಒಟ್ಟು 304 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಫಸ್ಟ್
1 ವಿರಾಟ್ ಕೊಹ್ಲಿ 8989
2 ರೋಹಿತ್ ಶರ್ಮಾ 8416
3 ಶಿಖರ್ ಧವನ್ 6769























