Home Advertisement
Home ಸಿನಿ ಮಿಲ್ಸ್ ಜಾನಪದ ಸವಿಯಲ್ಲಿ ಬ್ಯಾಚೆಲರ್ಸ್ ಆಂಥಮ್: ‘ನಿಂಗಣ್ಣಯ್’ ಬಿಡುಗಡೆ

ಜಾನಪದ ಸವಿಯಲ್ಲಿ ಬ್ಯಾಚೆಲರ್ಸ್ ಆಂಥಮ್: ‘ನಿಂಗಣ್ಣಯ್’ ಬಿಡುಗಡೆ

0
182

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳ ನಡುವೆ “ಲೋ ನವೀನ” ಚಿತ್ರದ ಮೂರನೇ ಪ್ರಮೋಷನಲ್ ಹಾಡು “ನಿಂಗಣ್ಣಯ್” ಬಿಡುಗಡೆಯಾಗಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಏಪ್ರಿಲ್ 1ರ ‘ಏಪ್ರಿಲ್ ಫೂಲ್’ ದಿನದ ವಿಶೇಷವಾಗಿ ಬಿಡುಗಡೆಗೊಂಡ ಈ ಹಾಡು, ಜಾನಪದ ಶೈಲಿ ಮತ್ತು ಮಂಡ್ಯ ಭಾಷೆಯ ಸೊಗಡಿನಿಂದ ವಿಭಿನ್ನತೆಯನ್ನು ಮೂಡಿಸಿದೆ.

ಈ ಹಾಡು ವಿಶೇಷವಾಗಿ ಬ್ರಹ್ಮಚಾರಿಗಳ ಜೀವನವನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿದ್ದು, “ಬೋಳ್ ತಲೆಗೆ ಎಣ್ಣೆ ಯಾಕೆ?”, “ವಯಸ್ಸಾದ ಮೇಲೆ ಮದುವೆ ಯಾಕೆ?” ಎಂಬ ಸಾಲುಗಳ ಮೂಲಕ ಸಾಮಾಜಿಕ ವ್ಯಂಗ್ಯವನ್ನು ಮೂಡಿಸಿದೆ. ಮದುವೆ ಹುಡುಕಾಟ, ಬ್ರೋಕರ್‌ಗಳ ಓಡಾಟ ಮತ್ತು ಖಾಲಿಯಾಗುವ ಜೇಬಿನಂತಹ ವಿಷಯಗಳನ್ನು ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿರುವುದರಿಂದ ಇದು ‘ಬ್ಯಾಚೆಲರ್ಸ್ ಆಂಥಮ್’ ಎಂದೇ ಜನಪ್ರಿಯತೆ ಪಡೆಯುತ್ತಿದೆ.

ಚಿತ್ರದ ನಾಯಕ ನವೀನ ಸಜ್ಜು ಈ ಹಾಡಿಗೆ ಧ್ವನಿಯಾಗಿದ್ದು, ಇದೇ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ “ಕೋಣಾಣೆ” ಹಾಡು ಕೂಡ ಹಳ್ಳಿಯ ಅಜ್ಜಿಯರ ಧ್ವನಿಯಿಂದ ವಿಶೇಷ ಮೆಚ್ಚುಗೆ ಪಡೆದಿತ್ತು.

“ಲೋ ನವೀನ” ಚಿತ್ರವನ್ನು ಅನಿವಾಸಿ ಭಾರತೀಯ ಬೆನ್ ಚಿಕ್ಕಸ್ವಾಮಿ ಅರ್ಪಿಸುತ್ತಿದ್ದು, ಕೀರ್ತಿಸ್ವಾಮಿ ನಿರ್ಮಾಣ ಮಾಡಿದ್ದಾರೆ. ಹೊಸ ನಿರ್ದೇಶಕ ಧನುರ್ಧಾರಿ ಪವನ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನವೀನ ಸಜ್ಜುಗೆ ನಟಿ ವರ್ಷ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣವನ್ನು ರಿಷಿಕೇಶ್ ನಿರ್ವಹಿಸಿದ್ದಾರೆ.

ಜಾನಪದ ಶೈಲಿಯಲ್ಲಿ ಹಾಸ್ಯ, ಉತ್ಸಾಹ ಮತ್ತು ಜೀವನದ ನೈಜ ಅಂಶಗಳನ್ನು ಒಳಗೊಂಡಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಜನಪದ ಶೈಲಿಯಲ್ಲಿ ತುಂಬಾ ಎನರ್ಜಿ ಮತ್ತು ಹಾಸ್ಯ ಹೊಂದಿರುವ ಹಾಡನ್ನು ನೀವು ಒಮ್ಮೆ ಕೇಳಿ ನೋಡಿ