ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಈಗ ರೋಚಕ ಹಂತ ತಲುಪಿದೆ. ವಾರದ ಕೊನೆಯ ವಿಕೆಂಡ್ ವಾರದಲ್ಲಿ ಯಾರು ಹೊರಡಲಿದ್ದಾರೆ ಎಂಬ ಕುತೂಹಲದ ಜೊತೆಗೆ, ಮನೆಯಲ್ಲಿ ನಡೆದಿರುವ ಗಂಭೀರ ನಿಯಮ ಉಲ್ಲಂಘನೆ ಮತ್ತು ವಿವಾದಗಳು ದೊಡ್ಡ ಚರ್ಚೆಗೆ ಗ್ರಾಸವಾಗಿವೆ.
ಈ ವಾರ ಮಂಜ, ಗಾನವಿ, ಗಗನ್, ಯಶಸ್, ಧನುಷ್, ಸೋನಿಕಾ ಮತ್ತು ತಾಂಡವ್ ರಾಮ್ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ವೋಟಿಂಗ್ ಆಧಾರದ ಮೇಲೆ ಇವರಲ್ಲಿ ಒಬ್ಬರ ನಿರ್ಗಮನ ಖಚಿತವಿದ್ದರೂ, ಟಾಸ್ಕ್ ನಡುವೆ ನಿಯಮ ಗಾಳಿಗೆ ತೂರಿರುವ ಮಂಜ, ಗಾನವಿ ಹಾಗೂ ಗಗನ್ ವರ್ತನೆ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಆಟದ ಭರದಲ್ಲಿ ಅವಾಚ್ಯ ಶಬ್ದಳನ್ನು ಬಳಸಿದ ಈ ಮೂವರಿಗೆ ಕೇವಲ ಎಲಿಮಿನೇಷನ್ ಸಾಲದು, ಕೂಡಲೇ ‘ರೆಡ್ ಕಾರ್ಡ್’ ನೀಡಿ ಹೊರಹಾಕಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಕೇಳಿಬರುತ್ತಿದೆ.
ಶಿಸ್ತು ಮತ್ತು ಸಭ್ಯತೆಯ ಗೆರೆ ದಾಟಿರುವ ಸ್ಪರ್ಧಿಗಳ ವಿರುದ್ಧ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈ ವಾರದ ಹೈಲೈಟ್ ಆಗಲಿದೆ.






















