SK Home Ad
Home ಸಿನಿ ಮಿಲ್ಸ್ ಕೇವಲ ಅಭಿಮಾನಿಗಳ ಕೇಕೆ ಸಾಕೇ? ಸುದೀಪ್‌ಗೆ ಉಗ್ರಪ್ಪ ನೇರ ಸವಾಲು

ಕೇವಲ ಅಭಿಮಾನಿಗಳ ಕೇಕೆ ಸಾಕೇ? ಸುದೀಪ್‌ಗೆ ಉಗ್ರಪ್ಪ ನೇರ ಸವಾಲು

0
46

ಚಿತ್ರದುರ್ಗ: ನಟ ಸುದೀಪ್ ನಾಯಕ ಸಮುದಾಯದ ವ್ಯಕ್ತಿಯೇ ಆಗಿದ್ದರೆ ಎಸ್‌ಟಿ ಮೀಸಲು ಹೆಚ್ಚಳದ ಪರ ಬೀದಿಗಿಳಿದು ಹೋರಾಟ ನಡೆಸಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದರು.

ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜಾವೀರ ಮದಕರಿ ನಾಯಕ ಜಯಂತ್ಯುತ್ಸವ ಸಮಾರಂಭದಲ್ಲಿ ಸುದೀಪ್ ಆಗಮನಕ್ಕೂ ಮುನ್ನ ಭಾಷಣ ಆರಂಭಿಸಿದ ಉಗ್ರಪ್ಪ, ನೆರೆದಿದ್ದ ಜನರು ಪದೇ ಪದೆ ಕಿಚ್ಚ ಸುದೀಪ್ ಪರ ಘೋಷಣೆಗೆ ಬೇಸತ್ತು ನಟನ ವಿರುದ್ಧವೇ ಸಿಡಿದೆದ್ದರು.

ರಾಜ್ಯದಲ್ಲಿ ನಾಯಕ ಸಮುದಾಯ ಅತ್ಯಂತ ಸಂಕಷ್ಟದಲ್ಲಿದೆ. ಎಸ್‌ಟಿ ಮೀಸಲು ಹೆಚ್ಚಳವೆಂಬುದು ಕೈಗೆಟುಕುತ್ತಿಲ್ಲ. ನಮ್ಮಂತವರು ನಿರಂತರ ಹೋರಾಟ ನಡೆಸುತ್ತಿದ್ದೇವೆ. ಇಂತಹ ಸಂದರ್ಭ ಕೇವಲ ಚಪ್ಪಾಳೆ, ಕೇಕೆ ಹಾಕಿಸಿಕೊಳ್ಳುವುದು ಸುದೀಪ್ ಬದುಕು ಆಗಬಾರದು. ಅವರು ನಾಯಕ ಸಮುದಾಯದ ವ್ಯಕ್ತಿ ಎಂಬುದನ್ನು ಸಾಬೀತುಪಡಿಸಲು ವಾಲ್ಮೀಕಿ ಜಾತಿ ಹಿತರಕ್ಷಣೆಗಾಗಿ ಹೋರಾಟಕ್ಕೆ ಇಳಿಯಬೇಕೆಂದು ಆಗ್ರಹಿಸಿದರು.