Home Advertisement
Home ನಮ್ಮ ಜಿಲ್ಲೆ ಧಾರವಾಡ ಆಧುನಿಕ ಯುಗದಲ್ಲಿಯೂ ಖದರ್ ಕಳೆದುಕೊಳ್ಳದ ಕುಸ್ತಿ

ಆಧುನಿಕ ಯುಗದಲ್ಲಿಯೂ ಖದರ್ ಕಳೆದುಕೊಳ್ಳದ ಕುಸ್ತಿ

0
49

ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 3 ದಿನಗಳವರೆಗೆ ನಡೆದ ಬಯಲು ಕುಸ್ತಿ ಸ್ಪರ್ಧೆಗಳು ಇಂದಿನ ಆಧುನಿಕ ಯುಗದಲ್ಲಿಯೂ ಕುಸ್ತಿ ಕ್ರೀಡೆ ತನ್ನ ಖದರು ಕಳೆದುಕೊಂಡಿಲ್ಲ ಎಂಬ ಜನಪ್ರಿಯತೆಯನ್ನು ತೋರಿಸಿದೆ.

ಬಯಲು ಕುಸ್ತಿಯ ಕೊನೆಯ ದಿನವಾದ ಗುರುವಾರ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಮಲ್ಲರಿಗೆ ಬೆನ್ನು ತಟ್ಟಿ ಹುರಿದುಂಬಿಸಿದರು. ಚಿಕ್ಕ ಮಕ್ಕಳು, ಯುವಕರು ತಮ್ಮ ಕುಸ್ತಿಯ ಹಲವಾರು ಕರಾಮತ್ತುಗಳನ್ನು ತೋರಿಸುತ್ತಿದ್ದರೆ ಕುಸ್ತಿಯ ಕ್ರೀಡಾಭಿಮಾನಿಗಳು ಮಲ್ಲರಿಗೆ ಸಿಳ್ಳೆ, ಕೇಕೆಯೊಂದಿಗೆ ಹುರಿದುಂಬಿಸುವ ಮೂಲಕ ಅಪ್ಪಟ ದೇಶೀಯ ಕ್ರೀಡೆ ಕುಸ್ತಿಯ ಜನಪ್ರಿಯತೆ ಇನ್ನೂ ಕುಂದಿಲ್ಲ ಎಂಬುದನ್ನು ಗ್ರಾಮದಲ್ಲಿ ಮೂರು ದಿನಗಳವರಗೆ ನಡೆದ ಬಯಲು ಕುಸ್ತಿಯು ಸಾಕ್ಷೀಕರಿಸಿತು.

ಈ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಧಾರವಾಡ, ಬೆಳಗಾವಿ, ಗೋಕಾಕ, ರಾಯಬಾಗ, ಲಕ್ಕುಂಡಿ, ಕೋಗಿಲಗೇರಿ, ಹಿರೇಹೊನ್ನಳ್ಳಿ, ನರೇಂದ್ರ, ಪುಡಕಲಕಟ್ಟಿ, ಕಲ್ಲೂರ, ಕರಡಿಗುಡ್ಡ, ಲೋಕೂರ ಹೀಗೆ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಕುಸ್ತಿಪಟುಗಳು ತಮ್ಮ ಕರಾಮತ್ತು ತೋರಿಸುವ ಮೂಲಕ ನೆರೆದಿದ್ದ ಜನರಿಗೆ ಕುಸ್ತಿ ಕಲೆಯ ರಸದೌತನ ನೀಡಿ ಕುಸ್ತಿಯ ಜೀವಂತಿಕೆಯನ್ನು ಪ್ರಚುರಪಡಿಸಿ ಇಂದಿನ ಯುವಕರಿಗೆ ಕುಸ್ತಿಯ ಮಹತ್ವ ಸಾರಿದರು.