Home Advertisement
Home ಸಿನಿ ಮಿಲ್ಸ್ “ಸರ್ಸೆ ಸರ್ಸೆ” ವಿವಾದ: ನನಗೆ ಗೊತ್ತೇ ಇರಲಿಲ್ಲ ಎಂದ ಬಾಲಿವುಡ್‌ ನಟಿ!

“ಸರ್ಸೆ ಸರ್ಸೆ” ವಿವಾದ: ನನಗೆ ಗೊತ್ತೇ ಇರಲಿಲ್ಲ ಎಂದ ಬಾಲಿವುಡ್‌ ನಟಿ!

0
77

ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ..ʼ ಹಾಡಿನ ಕುರಿತಂತೆ ದೊಡ್ಡ ವಿವಾದವೇ ಶುರುವಾಗಿದ್ದು, ಸದ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದ ಬಾಲಿವುಡ್‌ ನಟಿ ನೋರಾ ಫತೇಹಿ ಇದೆಲ್ಲವನ್ನೂ ನನಗೆ ಅರಿವಿಲ್ಲದೇ ಮಾಡಿದ್ದಾರೆ ಎನ್ನುವ ಮೂಲಕ ಇಡೀ ಚಿತ್ರತಂಡದ ವಿರುದ್ಧವೇ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾತನಾಡಿರುವ ನೋರಾ ಫತೇಹಿ, ಈ ಹಾಡನ್ನು ಚಿತ್ರೀಕರಿಸಿದ್ದು ಮೂರು ವರ್ಷಗಳ ಹಿಂದೆ. ಅಲ್ಲದೇ ಕನ್ನಡ ಭಾಷೆ ನನಗೆ ಅರ್ಥವಾಗುವುದಿಲ್ಲ. ಹೀಗಾಗಿ ನನಗೆ ಅದರಲ್ಲಿ ಯಾವುದೂ ಅಶ್ಲೀಲ ಅನಿಸಿರಲಿಲ್ಲ ಎಂದಿದ್ದಾರೆ.

ಸೆಟ್‌ನಲ್ಲಿದ್ದಾಗ ಈ ಹಾಡಿನ ಅರ್ಥ ತಿಳಿಯಲು ನಿರ್ದೇಶಕರಿಗೆ ಕೇಳಿದ್ದೆ. ಹಾಡನ್ನು ಅನುವಾದಿಸಿ ಹೇಳಿದಾಗ ಅದರಲ್ಲಿ ಅಶ್ಲೀಲ ಅನಿಸುವಂತಹದ್ದು ಯಾವುದೂ ಇರಲಿಲ್ಲ. ಆದರೆ ನನಗೆ ಕನ್ನಡ ತಿಳಿಯದ ಕಾರಣ, ಅವರು ಹೇಳಿದ್ದನ್ನೇ ಸಂಪೂರ್ಣವಾಗಿ ನಂಬಿದ್ದೆ. ಅವರು ಹೇಳಿದ್ದನ್ನೇ ನಾನು ಪಾಲಿಸಿದ್ದೇನೆ. ಈಗ ಹಿಂದಿ ಆವೃತ್ತಿಯ ಸಾಹಿತ್ಯ ಕೇಳಿ ನನಗೂ ಆಘಾತವಾಗಿದೆ ಎಂದು ನೋರಾ ತಿಳಿಸಿದ್ದಾರೆ.

ದೊಡ್ಡ ಸಿನಿಮಾ, ಸಂಜಯ್ ದತ್ ಅವರಂತಹ ಸ್ಟಾರ್ ನಟರು ಇದ್ದಾರೆ ಎನ್ನುವ ಕಾರಣಕ್ಕೆ ಈ ಚಿತ್ರವನ್ನು ನಾನು ಒಪ್ಪಿಕೊಂಡಿದ್ದೆ. ಅದು ನನಗೆ ಹಿಂದಿ ಚಿತ್ರ ಖಳನಾಯಕ್​ ಚಿತ್ರದ ರೀಮೇಕ್‌ನಂತೆ ಕಂಡಿತ್ತು. ಆದರೆ, ಈಗ ಈ ಹಾಡನ್ನು ಹಿಂದಿ ಆವೃತ್ತಿಗೆ ಡಬ್ ಮಾಡಿದಾಗ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಂಗ್‌ ರಿಲೀಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ನಾನು ಕನ್ನಡ ಹಾಡನ್ನು ಕೇಳಿದೆ. ಜತೆಗೆ ಅಲ್ಲಿ ಎಐ ಮೂಲಕ ಸೃಷ್ಟಿಸಿದ ಚಿತ್ರವನ್ನೂ ಹಾಕಿದ್ದರು. ಈದು ನನಗೆ ಕಿರಿಕಿರಿ ಅನಿಸಿತ್ತು. ಬಳಿಕ ಹಿಂದಿ ಆವೃತ್ತಿಯನ್ನು ಪ್ಲೇ ಮಾಡಿದಾಗ. ಆಗಲೇ, ಇದು ಗ್ಯಾರಂಟಿ ಸಮಸ್ಯೆ ತರುತ್ತದೆ ಎಂಬುದು ನನಗೆ ಅರ್ಥವಾಗಿತ್ತು. ನಾನು ನಿರ್ದೇಶಕರಿಗೂ ಈ ಬಗ್ಗೆ ಆಗಲೇ ತಿಳಿಸಿದ್ದೆ ಎಂದಿದ್ದಾರೆ.