Home Advertisement
Home ಸಿನಿ ಮಿಲ್ಸ್ ‘ವಿರೋಶ್’ ಯುಗಾರಂಭ: 16 ಪ್ರಸಿದ್ಧ ದೇವಸ್ಥಾನಗಳಿಗೆ ನವದಂಪತಿಗಳಿಂದ ಅನ್ನದಾನ ಹಾಗೂ ಸಿಹಿ ಹಂಚಿಕೆ

‘ವಿರೋಶ್’ ಯುಗಾರಂಭ: 16 ಪ್ರಸಿದ್ಧ ದೇವಸ್ಥಾನಗಳಿಗೆ ನವದಂಪತಿಗಳಿಂದ ಅನ್ನದಾನ ಹಾಗೂ ಸಿಹಿ ಹಂಚಿಕೆ

0
124

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಅಟ್ರಾಕ್ಟಿವ್ ಜೋಡಿ ಎನಿಸಿಕೊಂಡಿರುವ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಕೊನೆಗೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಫೆಬ್ರವರಿ 27 ರಂದು ಈ ಜೋಡಿ ಅತ್ಯಂತ ಗೌಪ್ಯವಾಗಿ ಸಪ್ತಪದಿ ತುಳಿದಿದ್ದು, ಈಗ ದೇವದರ್ಶನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಿರುಪತಿಯಲ್ಲಿ ದರ್ಶನ, ಭಕ್ತರಿಗೆ ಸಿಹಿ ಹಂಚಿಕೆ: ಮದುವೆಯ ನಂತರ ಈ ಜೋಡಿ ಮೊದಲು ಭೇಟಿ ನೀಡಿದ್ದು ಕಲಿಯುಗದ ದೈವ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ. ತಿರುಪತಿ ಬಾಲಾಜಿಯ ದರ್ಶನ ಪಡೆದ ನವದಂಪತಿಗಳು, ಅಲ್ಲಿನ ಭಕ್ತರಿಗೆ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರನ್ನು ಕಂಡ ಅಭಿಮಾನಿಗಳು ‘ಹ್ಯಾಪಿ ಮ್ಯಾರೀಡ್ ಲೈಫ್ ವಿರೋಶ್’ ಎಂದು ಕೂಗಿ ಶುಭ ಹಾರೈಸಿದ್ದಾರೆ.

16 ಪುಣ್ಯಕ್ಷೇತ್ರಗಳ ಪ್ರಸಾದ ಹಂಚಿಕೆಗೆ ಸಿದ್ಧವಾದ ವೇಳಾಪಟ್ಟಿ: ತಮ್ಮ ದಾಂಪತ್ಯ ಜೀವನದ ಆರಂಭದಲ್ಲಿ ದೈವಾನುಗ್ರಹ ಪಡೆಯಲು ಈ ಜೋಡಿ ಭಾರತದ ವಿವಿಧ ರಾಜ್ಯಗಳ 16 ಪ್ರಸಿದ್ಧ ದೇವಸ್ಥಾನಗಳಿಗೆ ಅನ್ನದಾನ ಮಾಡುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ: ಬೆಂಗಳೂರಿನ ಶಿವೋಹಂ ದೇವಸ್ಥಾನ ಹಾಗೂ ರಾಧಾ ಕೃಷ್ಣ ಮಂದಿರ (ಇಸ್ಕಾನ್), ಕೊಡಗಿನ ಪಾಡಿ ಇಗ್ಗುತಪ್ಪ ದೇವಸ್ಥಾನ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಿಹಿ ತಿಂಡಿ ನೀಡಲಿದ್ದಾರೆ.

ತೆಲಂಗಾಣ & ಆಂಧ್ರಪ್ರದೇಶ: ಹೈದರಾಬಾದ್‌ನ ಹರೇ ಕೃಷ್ಣ ಹೆರಿಟೇಜ್, ಮಹಬೂಬ್‌ನಗರದ ಮಾನ್ಯಂಕೊಂಡ ವೆಂಕಟೇಶ್ವರ ಸ್ವಾಮಿ, ವೈಜಾಗ್‌ನ ಕನಕ ಮಹಾಲಕ್ಷ್ಮಿ ಹಾಗೂ ವಿಜಯವಾಡದ ಕನಕದುರ್ಗ ದೇವಸ್ಥಾನಗಳು ಈ ಪಟ್ಟಿಯಲ್ಲಿವೆ.

ಇತರ ರಾಜ್ಯಗಳು: ಉತ್ತರ ಪ್ರದೇಶದ ಬೃಂದಾವನ (ಕೃಷ್ಣ ಬಲರಾಮ ಮಂದಿರ), ಅಸ್ಸಾಂನ ರುಕ್ಮಿಣಿ ದೇವಸ್ಥಾನ, ಗುಜರಾತ್ ಮತ್ತು ರಾಜಸ್ಥಾನದ ಪ್ರಸಿದ್ಧ ಮಂದಿರಗಳಿಗೂ ಈ ಜೋಡಿ ಅನ್ನದಾನ ಮಾಡಲಿದ್ದಾರೆ.

ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ: ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಬೇಕೆಂಬುದು ಕೋಟಿಗಟ್ಟಲೆ ಅಭಿಮಾನಿಗಳ ಆಸೆಯಾಗಿತ್ತು. ಪ್ರಸ್ತುತ ಹರಿದಾಡುತ್ತಿರುವ ಈ ಅನ್ನದಾನ ಪಟ್ಟಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿದ್ದು, ಜೊತೆಗೆ ಜನರ ಮೆಚ್ಚುಗೆಗೂ ವಿರೋಶ್‌ ಜೋಡಿ ಪಾತ್ರರಾಗಿದ್ದಾರೆ.