ಹುಬ್ಬಳ್ಳಿ: ನಗರದಲ್ಲಿ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆ ವಿರುದ್ಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಶುಕ್ರವಾರ ನಡೆದ ದಾಳಿಯಲ್ಲಿ 5 ಪ್ರತ್ಯೇಕ ಪ್ರಕರಣಗಳಲ್ಲಿ ಮಾಂಜಾ ರೀಲ್‌ಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ BNS ಕಲಂ 125 ಅಡಿ ಪ್ರಕರಣ ದಾಖಲಿಸಿದ್ದಾರೆ.
ವಿಶೇಷ ಕಾರ್ಯಾಚರಣೆಯ ವಿವರ: ನಗರಾದ್ಯಂತ 124 ಸ್ಥಳಗಳ ತಪಾಸಣೆ ನಡೆಸಲಾಗಿದ್ದು, 67 ಅಂಗಡಿಗಳನ್ನು ಪರಿಶೀಲಿಸಲಾಗಿದೆ. 69 ಕಡೆ ಮಾಂಜಾ ಬಳಕೆಯಾಗುತ್ತಿದ್ದ ಸ್ಥಳಗಳನ್ನು ಪತ್ತೆ ಹಚ್ಚಿ 63 ಅಪಾಯಕಾರಿ ಮಾಂಜಾ ರೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 16 ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಪ್ತಿಯಾದ ಪ್ರಕರಣಗಳು: ಬೆಂಡಿಗೇರಿ ಠಾಣೆ – 3 ರೀಲ್, 2 ಗಾಳಿಪಟ ಹಳೇಹುಬ್ಬಳ್ಳಿ ಠಾಣೆ (2 ಪ್ರಕರಣ) – 89 ರೀಲ್, 6 ಗಾಳಿಪಟ, ಎಪಿಎಂಸಿ ನವನಗರ – 3 ರೀಲ್, ಕಸಬಾಪೇಟೆ – 30 ರೀಲ್.
- ಸಚಿವರ ಜತೆ ಬಂದಿದ್ದ ಮಹಿಳೆಯಿಂದ ನಕಲಿ ಮತದಾನದ ಆರೋಪ
- ಗೋಲ್ಡನ್ ಚಾರಿಯಟ್ಗೆ ಹಸಿರು ನಿಶಾನೆ: ‘ಪ್ರೈಡ್ ಆಫ್ ಕರ್ನಾಟಕ’ ಯಾನ ಆರಂಭ
- ಮಾರಕ ಮಾಂಜಾ ವಿರುದ್ಧ ಹು- ಧಾ ಪೊಲೀಸರ ಸರ್ಜಿಕಲ್ ಸ್ಟ್ರೈಕ್ ,16 ಪ್ರಕರಣ ದಾಖಲು
- ಆಸ್ಪತ್ರೆಗಳಲ್ಲಿ ಏಕಬಳಕೆಯ ವೈದ್ಯಕೀಯ ಸಾಧನಗಳ ಮರುಬಳಕೆಗೆ ಕಟ್ಟುನಿಟ್ಟಿನ ನಿಷೇಧ
- ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ತಪ್ಪಿತಸ್ಥರಿಗೆ ರಕ್ಷಣೆ ಇಲ್ಲ: ಡಿ.ಕೆ. ಶಿವಕುಮಾರ್






















