ಹಾವೇರಿ (ಸವಣೂರು): ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವ ನಾಯಕತ್ವ ಸಿಕ್ಕಿದೆ. ಶಾಂತಿ ಸೌಹಾರ್ದತೆಯನ್ನು ನಮ್ಮ ದೇಶ, ನಾಡು ಹೊಂದಿದೆ. ಇಡಿ ವಿಶ್ವಕ್ಕೆ ಶಾಂತಿ, ಪ್ರೀತಿ ನೀಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗಿದೆ. ಆ ಕಾರ್ಯ ಅವರು ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಹಾಗೂ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
ಇದನ್ನೂ ಓದಿ: ಬಾಂಬ್ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
ಹಿಂದೂ ಧರ್ಮ ಉಳಿದರೆ ಭಾರತ ಉಳಿಯುತ್ತದೆ: ಇವತ್ತಿನ ಬೆಳವಣಿಗೆ ನೋಡಿದಾಗ ನಮಗೆ ಆತಂಕ ಆಗುತ್ತದೆ. ಯಾವುದನ್ನು ಮಾತುಕತೆಯಿಂದ ಮಾಡಬಹುದೊ ಅದನ್ನು ಮಿಸೈಲ್‌ನಿಂದ ಮಾಡಲಾಗುತ್ತಿದೆ. ಸನಾತನ ಹಿಂದೂ ಧರ್ಮ ಇರವುದು ಭಾರತದಲ್ಲಿ ಮಾತ್ರ. ಭಾರತ ಉಳಿಯಬೇಕೆಂದರೆ ಹಿಂದೂ ಧರ್ಮ ಉಳಿಯಬೇಕು, ಭಾರತ ಉಳಿದರೆ ಹಿಂದೂ ಧರ್ಮ ಉಳಿಯುತ್ತದೆ. ನಾವು ಯಾರನ್ನೂ ದ್ವೇಷಿಸುವುದಿಲ್ಲ ನಮ್ಮದು ಭಕ್ತಿ, ಪ್ರೀತಿ, ವಿಶ್ವಾಸದಿಂದ ಹುಟ್ಟಿರುವುದು ಇನ್ನೊಂದು ಧರ್ಮ ಆಸೆ, ಆಮಿಷ ಹುಟ್ಟಿಸಿ ಧರ್ಮ ಪ್ರಸಾರ ಮಾಡುತ್ತಾರೆ. ನಾವು ಸಂಸ್ಕಾರ ಪ್ರೀತಿ ವಿಶ್ವಾಸದಿಂದ ಧರ್ಮ ಉಳಿಸುತ್ತೇವೆ. ಇನ್ನೊಂದು ಧರ್ಮದ ದ್ವೇಷದ ನೆಲೆ ಗಟ್ಡಿನಲ್ಲಿ ಹುಟ್ಟಿದೆ. ಅದರಿಂದ ಪ್ರೀತಿ ವಿಶ್ವಾಸ ಹುಟ್ಟಲು ಸಾಧ್ಯವಿಲ್ಲ ಎರಡು ಮೂರು ವರ್ಷದಲ್ಲಿ ಹಿಂಸಾತ್ಮಕ ರೂಪ ತಾಳಿದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಆಗುವುದು ನಮ್ಮ ಮೇಲೂ ಪ್ರಭಾವ ಆಗುತ್ತದೆ. ನಮ್ಮ ಪೆಟ್ರೋಲಿಯಂ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ನಾವು ಅರಾಮಾಗಿ ಇರುತ್ತೇವೆ ಎನ್ನುವುದನ್ನು ಮರೆತು ಜಾಗ್ರತೆಯಿಂದ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವ ನಾಯಕತ್ವ ಸಿಕ್ಕಿದೆ. ಶಾಂತಿ ಸೌಹಾರ್ದ ಪ್ರತೀಕವಾಗಿರುವ ನಮ್ಮ ದೇಶ, ನಾಡು ಹೊಂದಿದೆ. ಇಡಿ ವಿಶ್ವಕ್ಕೆ ಶಾಂತಿ ಪ್ರೀತಿ ನೀಡುವ ಶಕ್ತಿ ಮೋದಿಯವರಿಗಿದ. ಆ ಕಾರ್ಯ ಅವರು ಮಾಡುತ್ತಾರೆ ಎನ್ನುವ ವಿಶ್ವಾಸ ಎಂದರು.
ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ
ಸಿದ್ಧಾಂತ ಶಿಖಾಮಣಿಯಲ್ಲಿ ಪರಿಹಾರ: ಈಗಿನ ಸಮಸ್ಯೆಗಳಿಗೆ ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಪರಿಹಾರ ಇದೆ. ಅವರು ಮಾನವ ಧರ್ಮಕ್ಕೆ ಜಯವಾಗಲಿ ಅಂತ ಹೇಳಿದರು. ಧರ್ಮಕ್ಕೆ ಜಯ ಅಂದರೆ ಸತ್ಯದ ದಾರಿಯೇ ಧರ್ಮದ ದಾರಿ, ಅದಕ್ಕೆ ರೇಣುಕಾಚಾರ್ಯರಿಂದ ಇವತ್ತಿನ ಪರಿಸ್ಥಿತಿ ಅವಲೋಕನ ಮಾಡಬೇಕು. ಮಾನವ ಜನ್ಮಕ್ಕೆ ಜಯವಾಗಲಿ ಅಂತ ಹೇಳಿದರು. ನಾವೆಲ್ಲರೂ ಮನುಷ್ಯರಾಗಿ ಹುಟ್ಟಿ ಮನುಷ್ಯರಾಗಿಯೇ ಸಾಯುತ್ತೇವೆ. ಕೆಲವರು ಮನುಷ್ಯರಾಗಿ ಹುಟ್ಟಿ ಮಾನವರಾಗಿ ಸಾಯುತ್ತಾರೆ. ಕೆಲವೇ ಕೆಲವು ಜನರು ದೇವ ಮಾನವರಾಗುತ್ತಾರೆ. ಕಾಮ, ಕ್ರೊಧ, ಮದ, ಮೋಹ ಮತ್ಸರದ ಸಂಕೋಲೆಗೆ ಸಿಲುಕಿದವನು ಮನುಷ್ಯ. ಪ್ರೀತಿ ವಿಶ್ವಾಸದ ಸಂಕೋಲೆಯಲ್ಲಿ ಸಿಲುಕಿದವರು ಮಾನವ. ಅದಕ್ಕೆ ರೇಣುಕಾಚಾರ್ಯರು ಮಾನವ ಜನ್ಮಕ್ಕೆ ಜಯವಾಗಲಿ ಅಂದರು. ಈ ಬದಲಾವಣೆ ನಮ್ಮ ಸುತ್ತಲಿನ ಪರಿವಾರದಿಂದ ಬದಲಾಗಿ ಇಡಿ ವಿಶ್ವದ ಸಂಸ್ಕಾರ ಸಾಮರಸ್ಯದ ದಿನ ಆದಾಗ ಇಡಿ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಎಂದರು.























