SK Home Ad
Home ನಮ್ಮ ಜಿಲ್ಲೆ ಕಲಬುರಗಿ ಬಂದೋಬಸ್ತ್ ಮಧ್ಯೆ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ

ಬಂದೋಬಸ್ತ್ ಮಧ್ಯೆ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ

0
431

ಆಳಂದ: ಪಟ್ಟಣದಲ್ಲಿನ ಸೂಫಿ ಸಂತ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಎನ್ನಲಾದ ರಾಘವ ಚೈತನ್ಯರ ಸಮಾಧಿಯ ಶಿವಲಿಂಗ ಪೂಜೆಯ ಭಾನುವಾರ ಶಾಂತಿಯುತವಾಗಿ ನಡೆಯಿತು.

ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತವು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು.

ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ಹೆಚ್ಚುವರಿ ಎಸ್‌ಪಿ, ಡಿವೈಎಸ್‌ಪಿ, ವಿವಿಧ ವಲಯಗಳ ಪಿಎಸ್‌ಐಗಳು ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ ಹಾಕಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಶಿವರಾತ್ರಿಯಂದೇ ಶಿವನ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

ಕಟ್ಟುನಿಟ್ಟಿನ ಪೊಲೀಸ್ ಸರ್ಪಗಾವಲು ಹಾಗೂ ತಾಲೂಕು ಆಡಳಿತದ ನಿಗಾದ ನಡುವೆ ರಾಘವ ಚೈತನ್ಯರ ಸಮಾಧಿಯಲ್ಲಿ ಶಿವಲಿಂಗ ಪೂಜೆ ಸಂಪೂರ್ಣ ಶಾಂತಿಯುತವಾಗಿ ನೆರವೇರಿತು. ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳು ಸಂಭವಿಸದೆ, ಪೂಜೆ ಕಾರ್ಯಕ್ರಮ ಸುವ್ಯವಸ್ಥಿತವಾಗಿ ಮುಕ್ತಾಯವಾಯಿತು.