Home Advertisement
Home ಸಿನಿ ಮಿಲ್ಸ್ ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಸಂಕಷ್ಟ; ಹಳ್ಳಿ ಪ್ರತಿಭೆ ಮೇಲೆ ಮೊದಲ ಬಾರಿಗೆ ಗಂಭೀರ ಆರೋಪ

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಸಂಕಷ್ಟ; ಹಳ್ಳಿ ಪ್ರತಿಭೆ ಮೇಲೆ ಮೊದಲ ಬಾರಿಗೆ ಗಂಭೀರ ಆರೋಪ

0
101

“ದುಡ್ಡೆ ದೊಡಪ್ಪ” ದುಡ್ಡು ಬಂದ ಮೇಲೆ ಗಿಲ್ಲಿ ಹವಾ ಬೇರೆನೇ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿರೀಟ ಮುಡಿಗೇರಿಸಿಕೊಂಡ ಹಾಸ್ಯ ನಟ ‘ಗಿಲ್ಲಿ’ ಸದ್ಯ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಗಿಲ್ಲಿ ಜನಪ್ರಿಯತೆ ಗಗನಕ್ಕೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳು ಸಖತ್ ಟ್ರೆಂಡ್ ಆಗುತ್ತಿವೆ. ಆದ್ರೆ ಈ ಯಶಸ್ಸಿನ ನಡುವೆಯೇ ಗಿಲ್ಲಿ ನಟ ಈಗ ಹೊಸದೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಚಿತ್ರತಂಡದ ಗಂಭೀರ ಆರೋಪ: ಗಿಲ್ಲಿ ನಟ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸರ್ಕಾರಿ ಶಾಲೆ H8’ ಇಂದು (ಫೆಬ್ರುವರಿ 6) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಆದ್ರೆ ಸಿನಿಮಾದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಗಳಿಗೆ (Promotions) ಗಿಲ್ಲಿ ನಟ ಭಾಗಿಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ವಿನ್ನರ್ ಆದ ನಂತರ ಸಿಕ್ಕ ಜನಪ್ರಿಯತೆಯ ಗುಂಗಿನಲ್ಲಿರುವ ನಟ, ತಮ್ಮದೇ ಸಿನಿಮಾದ ಪ್ರಚಾರಕ್ಕೆ ಅಸಹಕಾರ ತೋರುತ್ತಿದ್ದಾರೆ ಎಂದು ಚಿತ್ರತಂಡ ದೂರಿದೆ. ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ಇರಬೇಕಾದ ತಂಡಕ್ಕೆ ನಟನ ಈ ನಡೆ ಬೇಸರ ತರಿಸಿದೆ.

ನಿಗೂಢ ಕಥೆಯ ‘ಸರ್ಕಾರಿ ಶಾಲೆ H8’: ಗುಣ ಹರಿಯಬ್ಬೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಕೇವಲ ಹಾಸ್ಯಕ್ಕೆ ಸೀಮಿತವಾಗದೆ, ಒಂದು ನಿಗೂಢ ವಿಗ್ರಹದ ಸುತ್ತ ಸಾಗುವ ಸಸ್ಪೆನ್ಸ್ ಕಥಾಹಂದರವನ್ನು ಹೊಂದಿದೆ. ಗಿರಿಚಂದ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ತೇಜಸ್ವಿನಿ ಎಸ್.ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗಿಲ್ಲಿ ಜೊತೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಮೇಘಶ್ರೀ, ಸುಚೇಂದ್ರ ಪ್ರಸಾದ್ ಹಾಗೂ ಬಿಗ್ ಬಾಸ್ ಖ್ಯಾತಿಯ ಜಗ್ಗಪ್ಪ ಮತ್ತು ನವಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕ ಶ್ರೀಮಂತಿಕೆ: ಚಿತ್ರಕ್ಕೆ ವಿಜೇತ್ ಮಂಜಿಯಾ ಸಂಗೀತ ನೀಡಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಹಾಸ್ಯನಟ ಶರಣ್ ಮತ್ತು ಮೆಹಬೂಬ್ ಸಾಬ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗದಂತಹ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ಸದ್ಯ ಗಿಲ್ಲಿ ನಟನ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದರೂ, ಚಿತ್ರತಂಡ ಮಾಡಿರುವ ಅಸಹಕಾರದ ಆರೋಪ ಗಿಲ್ಲಿ ಇಮೇಜ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleMovie Review ʼರಕ್ಕಸಪುರದೋಳ್ʼ: ರಕ್ಕಸನ ಜಾಡು ಹಿಡಿದು…
Next articleMovie Review ʼಜೆಸಿʼ: ಹರೆಯದ ಹುಡುಗನ ‘ಲಾಂಗ್ ಸ್ಟೋರಿ’