Home Advertisement
Home ತಾಜಾ ಸುದ್ದಿ ಪತ್ನಿ, ಮಗುವನ್ನು ಕೊಂದು ಆತ್ಮಹತ್ಯೆ

ಪತ್ನಿ, ಮಗುವನ್ನು ಕೊಂದು ಆತ್ಮಹತ್ಯೆ

0
70

ಮಂಗಳೂರು: ಪತ್ನಿ, ಮಗುವನ್ನು ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಪತ್ನಿ ಪ್ರಿಯಾಂಕ (೨೮) ಮಗು ಹೃದಯ್ (೪) ಕೊಲೆಗೀಡಾದವರು. ಕಾರ್ತಿಕ್ ಭಟ್ (೩೨) ಕೊಲೆ ಮಾಡಿದಾತ.
ರೈಲಿಗೆ ತಲೆಕೊಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ಳಾಯರು ರೈಲ್ವೇ ಹಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿತ್ತು. ಈ ವ್ಯಕ್ತಿಯನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್(೩೨) ಎಂದು ಗುರುತಿಸಲಾಗಿದೆ. ಬಳಿಕ ವ್ಯಕ್ತಿಯ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ತಿಕ ವಾಸ ಮಾಡುತ್ತಿದ್ದ ಪ್ಲ್ಯಾಟ್‌ಗೆ ತೆರಳಿದ್ದಾರೆ, ಪ್ಲ್ಯಾಟ್‌ನಲ್ಲಿ ಕಾರ್ತಿಕ್ ಪತ್ನಿ ಮತ್ತು ಮಗುವಿನ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ದಿನಗಳಿಂದ ಬಾಗಿಲು ಮುಚ್ಚಿದ್ದು ಪತ್ನಿ ಮಗುವನ್ನು ಕೊಂದು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪಕ್ಷಿಕೆರೆ ಜಂಕ್ಷನ್‌ನಲ್ಲಿ ‘ಹೋಟೆಲ್ ಕಾರ್ತಿಕ್’ ನಡೆಸುತ್ತಿರುವ ಜನಾರ್ಧನ ಭಟ್ ಎಂಬವರ ಮೂವರು ಮಕ್ಕಳಲ್ಲಿ ಒಬ್ಬನಾದ ಕಾರ್ತಿಕ್ ಕದ್ರಿಯ ಸೊಸೈಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ.
ಶುಕ್ರವಾರ ಮಧ್ಯಾಹ್ನ ತನ್ನ ಸ್ಕೂಟರ್ ಅನ್ನು ಕಲ್ಲಾಪು ದೇವಸ್ಥಾನ ಬಳಿ ನಿಲ್ಲಿಸಿ ರೈಲು ಹಳಿಯಲ್ಲಿ ಹೋಗಿದ್ದು ಬಳಿಕ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪಟ್ಟೆಯಾಗಿತ್ತು. ಮೂಲ್ಕಿ ಠಾಣಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Previous articleನೀವೇನು ಬಳ್ಳಾರಿ ಯಜಮಾನರಾ…?
Next articleಹಲಕರ್ಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ