Home Advertisement
Home ತಾಜಾ ಸುದ್ದಿ ಕೇಂದ್ರ ಸಚಿವ ಸಂಪುಟ ಸಭೆಗಾಗಿ ಪ್ರಲ್ಹಾದ ಜೋಶಿ ದೆಹಲಿಗೆ ಪ್ರಯಾಣ

ಕೇಂದ್ರ ಸಚಿವ ಸಂಪುಟ ಸಭೆಗಾಗಿ ಪ್ರಲ್ಹಾದ ಜೋಶಿ ದೆಹಲಿಗೆ ಪ್ರಯಾಣ

0
62

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ ಜೋಶಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವುದಾಗಿ ಸಚಿವರು ಟ್ವೀಟ್ ಅಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬುಧವಾರ ಕೇಂದ್ರ ಮಂತ್ರಿ ಮಂಡಲ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸತತ 5ನೇ ಬಾರಿ ಐತಿಹಾಸಿಕ, ದಾಖಲೆಯ ಗೆಲುವು ತಂದುಕೊಟ್ಟಿದ್ದು ಖುಷಿ ಕೊಟ್ಟಿದೆ. ಮಂತ್ರಿ ಮಂಡಲ ಸಭೆ ಬಳಿಕ ಕ್ಷೇತ್ರಕ್ಕೆ ವಾಪಸಾದ ನಂತರ ಮತದಾರರು ಮತ್ತು ಕಾರ್ಯಕರ್ತರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗುವುದಾಗಿ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

Previous articleಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ
Next articleನಿರ್ವಾಹಕಿ ಮೇಲೆ ಹಲ್ಲೆ :ಪೋಲಿಸ್ ಠಾಣೆಯಲ್ಲಿ ದೂರು