SK Home Ad
Home ತಾಜಾ ಸುದ್ದಿ ಮತದಾನ: ಯಲ್ಲಮ್ಮನ ದರ್ಶನಕ್ಕೆ ನಿರ್ಬಂಧ

ಮತದಾನ: ಯಲ್ಲಮ್ಮನ ದರ್ಶನಕ್ಕೆ ನಿರ್ಬಂಧ

0
183

ಬೆಳಗಾವಿ: ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಮೇ ೭ರಂದು ಮತದಾನ ನಡೆಯಲಿದ್ದು ೨ನೇ ಹಂತದ ಮತದಾನ ಹಿನ್ನೆಲೆ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.
ಪ್ರತಿ ಮಂಗಳವಾರ ಲಕ್ಷಾಂತರ ಜನ ಮತದಾನ ಬಿಟ್ಟು ದೇಗುಲಕ್ಕೆ ಆಗಮಿಸುವ ಸಾಧ್ಯತೆ ಹಿನ್ನೆಲೆ ಜಿಲ್ಲಾಡಳಿತ ಮೇ ೭ರಂದು ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗಿದೆ.
ಈಗಾಗಲೇ ಬ್ಯಾರಿಕೇಡ್ ಹಾಕಿ ದೇವಸ್ಥಾನದ ಒಳಗೆ ಯಾರೂ ಬರದಂತೆ ಬಂದ ಮಾಡಲಾಗಿದೆ. ದೇವಿಗೆ ಎಂದಿನಂತೆ ಪೂಜಾ ಕಾರ್ಯಗಳು ನಡೆಯಲಿವೆ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿ. ದೇವಸ್ಥಾನಕ್ಕೆ ಯಾರೂ ಬಾರದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಮಹೇಶ್ ಮನವಿ ಮಾಡಿಕೊಂಡಿದ್ದಾರೆ.